ಶುಕ್ರವಾರ, ಡಿಸೆಂಬರ್ 6, 2019
20 °C

ಕ್ರಿಕೆಟ್‌: ಕರ್ನಾಟಕದ ರಾಹುಲ್‌ಗೆ ಸ್ಥಾನ

Published:
Updated:
ಕ್ರಿಕೆಟ್‌: ಕರ್ನಾಟಕದ ರಾಹುಲ್‌ಗೆ ಸ್ಥಾನ

ನವದೆಹಲಿ: ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್‌ ಲೋಕೇಶ್ ರಾಹುಲ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಯಲ್ಲಿ ಭಾರತ ತಂಡಕ್ಕೆ ಮರಳಿದ್ದಾರೆ. ಜುಲೈ 26ರಿಂದ ಪಂದ್ಯಗಳು ನಡೆಯಲಿವೆ.

ಫಾರ್ಮ್‌ಗೆ ಮರಳಲು ವಿಫಲರಾಗಿರುವ ರಾಜ್ಯದ ಬ್ಯಾಟ್ಸ್‌ಮನ್‌ ಕರುಣ್ ನಾಯರ್ ಬದಲಾಗಿ ಅನುಭವಿ ರೋಹಿತ್ ಶರ್ಮಾಗೆ ತಂಡದಲ್ಲಿ ಆಯ್ಕೆ ಸಮಿತಿ ಮನ್ನಣೆ ನೀಡಿದೆ.

ಕರುಣ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೇವಲ 26, 23, 5ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಕೆಲವು ದಿನಗಳ ಹಿಂದೆಯೇ ರಾಷ್ಟ್ರೀಯ ಆಯ್ಕೆ ಸಮಿತಿ ಭಾರತ ‘ಎ’ ತಂಡದ ನಾಯಕನ ಸ್ಥಾನಕ್ಕೆ ಕರುಣ್ ಅವರನ್ನು ಆಯ್ಕೆ ಮಾಡಿತ್ತು. 

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್‌, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಇಶಾಂತ್ ಶರ್ಮಾ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್‌ ಶಮಿ, ಕುಲ್‌ದೀಪ್‌ ಯಾದವ್‌, ಅಭಿನವ್‌ ಮುಕುಂದ್‌.

ಪ್ರತಿಕ್ರಿಯಿಸಿ (+)