ಶುಕ್ರವಾರ, ಡಿಸೆಂಬರ್ 6, 2019
17 °C

ಇಂಗ್ಲಿಷ್ ಕೌಂಟಿ ತೊರೆದ ತಮೀಮ್

Published:
Updated:
ಇಂಗ್ಲಿಷ್  ಕೌಂಟಿ ತೊರೆದ ತಮೀಮ್

ಲಂಡನ್ (ಎಎಫ್‌ಪಿ): ಬಾಂಗ್ಲಾದೇಶ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅವರು ಇಂಗ್ಲಿಷ್‌ ಕೌಂಟಿಯ ಎಸ್ಸೆಕ್ಸ್ ತಂಡವನ್ನು ತೊರೆದಿದ್ದಾರೆ.

28 ವರ್ಷದ ತಮೀಮ್ ಅವರು ಎಸ್ಸೆಕ್ಸ್ ಪರವಾಗಿ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದರು.

‘ವೈಯಕ್ತಿಕ ಕಾರಣಗಳಿಂದಾಗಿ ತಂಡ ವನ್ನು ತೊರೆದಿದ್ದಾರೆ. ಅವರಿಗೆ ಭವಿಷ್ಯ ದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸು ತ್ತೇವೆ. ಅವರು ತಂಡವನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಸಂಬಂಧಿಸಿದ ಕಾರಣಗಳನ್ನು ಗೌಪ್ಯವಾಗಿಡಲು ಇಚ್ಛಿಸು ತ್ತೇವೆ’ ಎಂದು ಕ್ಲಬ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)