ಶನಿವಾರ, ಡಿಸೆಂಬರ್ 14, 2019
25 °C

ಹರಿಕೃಷ್ಣಗೆ ಜಂಟಿ ನಾಲ್ಕನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ಹರಿಕೃಷ್ಣಗೆ ಜಂಟಿ ನಾಲ್ಕನೇ ಸ್ಥಾನ

ಜಿನೀವಾ: ಸಮರ್ಥ ಆಟ ಆಡಿದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಇಲ್ಲಿ ನಡೆದ ಫಿಡೆ ಗ್ರ್ಯಾನ್‌ಪ್ರಿ ಚೆಸ್ ಟೂರ್ನಿಯಲ್ಲಿ ಜಂಟಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ರಷ್ಯಾದ ಡಿಮಿಟ್ರಿ ಜಕೊವಿಂಕೊ ಅವರ ಎದುರು ಭಾನುವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಅವರು ಡ್ರಾ ಸಾಧಿಸುವ ಮೂಲಕ ಈ ಸಾಧನೆ ಮಾಡಿದರು. ವಿಶ್ವ ಕ್ರಮಾಂಕದಲ್ಲಿ 22ನೇ ಸ್ಥಾನದಲ್ಲಿರುವ  ಹರಿಕೃಷ್ಣ ಜಯದೊಂದಿಗೆ ಟೂರ್ನಿಗೆ ಕೊನೆ ಹಾಡುವ ಯೋಜನೆಯೊಂದಿಗೆ ಸ್ಪರ್ಧೆಗೆ ಇಳಿದಿದ್ದರು. ಬಿಳಿಕಾಯಿಗಳೊಂದಿಗೆ ಆಡಿದ ಅವರು ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.

ಆದರೆ ರಷ್ಯಾ ಆಟಗಾರ ಬೇರೆಯೇ  ತಂತ್ರಗಳನ್ನು ಹೆಣೆದು ಪ್ರತಿಸ್ಪರ್ಧೆ ಒಡ್ಡಿದರು. 115 ನಡೆಗಳ ಪಂದ್ಯದ ಕೊನೆಯಲ್ಲಿ ಇಬ್ಬರೂ ಡ್ರಾಗೆ ಒಪ್ಪಿಕೊಂಡರು.

‘ನನಗೆ ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಎದುರಾಳಿ ರಕ್ಷಣಾತ್ಮಕ ಆಟವಾಡಿ ಸೋಲು ತಪ್ಪಿಸಿಕೊಂಡರು. ಹೀಗಾಗಿ ಡ್ರಾಗೆ ಸಮ್ಮತಿಸಬೇಕಾಯಿತು’ ಎಂದು ಹರಿಕೃಷ್ಣ ಹೇಳಿದರು.

ಟೂರ್ನಿಯಲ್ಲಿ ಕೇವಲ ಒಂದು ಸೋಲು ಕಂಡಿರುವ ಅವರು ಆರು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಒಂದು ಪಂದ್ಯ ಗೆದ್ದಿದ್ದಾರೆ. ಈ ಮೂಲಕ 90 ಗ್ರ್ಯಾನ್‌ಪ್ರೀ ಪಾಯಿಂಟ್‌ಗಳು ಅವರಿಗೆ ಲಭಿಸಿವೆ.

ಪ್ರತಿಕ್ರಿಯಿಸಿ (+)