ಮುಂಬೈ: ಹಾಡುಗಳಿಂದ ಸಂಚಲನ ಸೃಷ್ಟಿಸಿರುವ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೆಜಲ್‘ ಚಿತ್ರವನ್ನು ಯುಎಇ ಮತ್ತು ಗಲ್ಫ್ ದೇಶಗಳಲ್ಲಿ ಅಗಸ್ಟ್ 3 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಈ ಕುರಿತು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಮಧ್ಯ ಏಷ್ಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ತಮ್ಮ ಹಿಂದಿನ ಚಿತ್ರ ‘ರಾಯಿಸ್‘ ಅನ್ನು ಕೂಡಾ ಈಜಿಪ್ಟ್ ಹಾಗೂ ಜೋರ್ಡನ್ ಗಳಲ್ಲಿ ಬಿಡುಗಡೆ ಮಾಡಿದ್ದರು. ಅಂದಹಾಗೆ ಈ ಚಿತ್ರ ಭಾರತದಲ್ಲಿ ಅಗಸ್ಟ್ 4 ರಂದು ತೆರೆಕಾಣಲಿದೆ.