ಭಾನುವಾರ, ಡಿಸೆಂಬರ್ 15, 2019
18 °C

ಪತ್ನಿ ಜತೆಯಿರುವ ಫೋಟೊ ಅಪ್‍ಲೋಡ್ ಮಾಡಿದ್ದಕ್ಕೆ ಇರ್ಫಾನ್ ಪಠಾಣ್‍ 'ಇಸ್ಲಾಂ ವಿರೋಧಿ'?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ನಿ ಜತೆಯಿರುವ ಫೋಟೊ ಅಪ್‍ಲೋಡ್ ಮಾಡಿದ್ದಕ್ಕೆ ಇರ್ಫಾನ್ ಪಠಾಣ್‍ 'ಇಸ್ಲಾಂ ವಿರೋಧಿ'?

ನವದೆಹಲಿ: ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿಯೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಯೊಂದನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. 

ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ  “This girl is trouble ?? #love #wifey” ಎಂಬ ಶೀರ್ಷಿಕೆ ನೀಡಿ ಅಪ್‍ಲೋಡ್ ಮಾಡಿರುವ ಆ ಚಿತ್ರದಲ್ಲಿ ಪಠಾಣ್ ಪತ್ನಿ ಸಫಾ ಬೇಗ್, ತಮ್ಮ ಅರ್ಧ ಮುಖ ಮುಚ್ಚಿಕೊಂಡು ತುಂಟ ನಗು ಬೀರಿದ್ದಾರೆ.

ಈ ಫೋಟೋಗೆ ಮೆಚ್ಚುಗೆಯ ಸುರಿಮಳೆಯ ಜತೆಗೆ ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್ ಧರಿಸದೆ ಮುಖ ತೋರಿಸಿದ್ದು ತಪ್ಪು. ಆಕೆ ಉಗುರಿಗೆ ನೈಲ್ ಪಾಲಿಶ್ ಹಚ್ಚಿಕೊಂಡಿದ್ದು ತಪ್ಪು. ಈ ರೀತಿ ಫೋಟೊ ತೆಗೆಸಿದ್ದು ಕೂಡಾ ಇಸ್ಲಾಂ ವಿರೋಧಿ ಎಂಬ ಕಾಮೆಂಟ್‍ಗಳು ಬಂದಿವೆ.

ಈ ಫೋಟೋವನ್ನು ಫೇಸ್‍ಬುಕ್‍ನಿಂದ ತೆಗೆಯಿರಿ. ಇದು ಒಬ್ಬ ಉತ್ತಮ ಮುಸ್ಲಿಂ ಆಗಿ ಈ ರೀತಿಯ ಫೋಟೊ ಹಾಕಬಾರದು. ಒಬ್ಬ ಪಠಾಣ್ ಮತ್ತು ಮುಸ್ಲಿಂ ಆಗಿರುವ ನೀವು ಆಕೆಯಲ್ಲಿ ಆಕೆಯ ತೋಳುಗಳನ್ನು ಮುಚ್ಚುವಂತೆ ಹೇಳಿ ಇದು ನಿಮ್ಮ ಕರ್ತವ್ಯ ಎಂಬ ನೀತಿ ಪಾಠಗಳೂ ಕಾಮೆಂಟ್‍ನಲ್ಲಿ ವ್ಯಕ್ತವಾಗಿವೆ.

ಇತ್ತ ತಮ್ಮ ಟ್ವಿಟರ್ ಖಾತೆಯಲ್ಲಿಯೂ ಅದೇ ಫೋಟೊವನ್ನು ಅಪ್‍ಲೋಡ್ ಮಾಡಿರುವ ಪಠಾಣ್  'ಕುಚ್ ತೋ ಲೋಗ್ ಕಹೇಂಗೆ ಲೋಗೋಂ ಕಾ ಕಾಮ್ ಹೈ ಕೆಹೆನಾ' (ಜನರು ಏನಾದರೂ ಹೇಳ್ತಾರೆ, ಹೇಳುವುದೇ ಅವರ ಕೆಲಸ) ಎಂದು ಅಮರ್ ಪ್ರೇಮ್ ಸಿನಿಮಾದ ಹಾಡಿನ ಸಾಲೊಂದನ್ನು ಉಲ್ಲೇಖಿಸಿ ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ.

ಜೆದ್ದಾದಲ್ಲಿ ರೂಪದರ್ಶಿಯಾಗಿದ್ದ ಬೇಗ್ ಅವರನ್ನು ಮದುವೆಯಾಗಿರುವ ಪಠಾಣ್‍ ಕಳೆದ ಡಿಸೆಂಬರ್ ತಿಂಗಳಲ್ಲಿ ಗಂಡು ಮಗುವಿನ ಅಪ್ಪನಾಗಿದ್ದಾರೆ.

ಪ್ರತಿಕ್ರಿಯಿಸಿ (+)