ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಬಾಲಾ ಆಗುವರೇ ಕರೀನಾ?

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಬರ್‌ಸಾತ್ ಕಿ ರಾತ್’, ‘ಮೊಘಲ್‌ ಏ ಅಜಂ’ ನಂತಹ ಅನೇಕ ಚಿತ್ರಗಳಲ್ಲಿ ನಟಿಸಿ, ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದ ನಟಿ ಮಧುಬಾಲಾ. ಅಪ್ರತಿಮ ಸುಂದರಿಯಾಗಿಯೂ ಮಧುಬಾಲಾ ರಸಿಕರ ಮನಗೆದ್ದಿದ್ದರು. ತಮ್ಮ ಮೋಹಕ ನೋಟ, ನಟನಾ ಸಾಮರ್ಥ್ಯ, ನೃತ್ಯದಿಂದ 1942ರಿಂದ 1962ರವರೆಗೆ ಬಹುಬೇಡಿಕೆಯ ನಟಿಯಾಗಿ ಜಗತ್ತಿನ ಗಮನ ಸೆಳೆದವರು ಇವರು. ಇವರ ನಟನೆಯ ‘ಪ್ಯಾರ್‌ ಕಿಯಾ ತೋ ಡರ್‌ನಾ ಕ್ಯಾ’ ಹಾಡಂತೂ ಇಂದಿಗೂ ಹಲವರ ಅಚ್ಚುಮೆಚ್ಚಿನ ಹಾಡು.

ಇತ್ತೀಚೆಗೆ ದೆಹಲಿಯ ಮೇಡಮ್ ಟುಸ್ಸಾಡ್ಸ್‌ನಲ್ಲಿ ನಡೆದ ಅವರ ಮೇಣದ ಪ್ರತಿಮೆಯ ಅನಾವರಣದ ಕಾರ್ಯಕ್ರಮದಲ್ಲಿ ಮಧುಬಾಲಾ ಅವರ ಸಹೋದರಿ ಮಧುರ್ ಬ್ರಿಜಿ ಅವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ, ‘ನಿಮ್ಮ ಸಹೋದರಿಯ ಜೀವನ ಆಧಾರಿತ ಚಿತ್ರ ನಿರ್ಮಿಸಿದರೆ, ಅವರ ಪಾತ್ರವನ್ನು ಯಾರು ನಿರ್ವಹಿಸಬೇಕು ಎಂದು ನೀವು ಬಯಸುವಿರಿ?’ ಎಂದು ಮಧುರ್ ಅವರನ್ನು ಕೇಳಲಾಯಿತು. ‘ಕರೀನಾ ಕಪೂರ್ ಖಾನ್’ ಎಂಬುದು ಅವರ ಉತ್ತರವಾಗಿತ್ತು.

‘ನಾನು ನನ್ನ ಸಹೋದರಿಯ ಪಾತ್ರವನ್ನು ಮಾಧುರಿ ದೀಕ್ಷಿತ್ ಅವರು ನಿರ್ವಹಿಸಬೇಕು ಎಂದು ಬಯಸಿದ ಕಾಲವೊಂದಿತ್ತು. ಆದರೆ ಈಗ ನಾನು ಕರೀನಾ ಕಪೂರ್ ಖಾನ್ ಅವರು ಪಾತ್ರ ನಿರ್ವಹಿಸುವುದನ್ನು ಬಯಸುವೆ. ಅದಕ್ಕೆ ಮುಖ್ಯ ಕಾರಣ, ಕರೀನಾ ಅವರಲ್ಲಿ ಮಧುಬಾಲಾ ಅವರಲ್ಲಿದ್ದ ತುಂಟತನ ಇದೆ ಮತ್ತು ಕರೀನಾ ಅವರು ಸುಂದರಿಯೂ ಆಗಿದ್ದಾರೆ’ ಎಂದಿದ್ದಾರೆ.

ಮಧುಬಾಲಾ ಅವರ ಬಗ್ಗೆ ಮಾತನಾಡುತ್ತಾ, ‘ಅವರು ಮನೆಯಲ್ಲಿ ಬಹಳ ಸರಳವಾಗಿರುತ್ತಿದ್ದರು. ಮಕ್ಕಳಲ್ಲಿ ಅವರೇ ದೊಡ್ಡವರಾದರೂ ಎಂದೂ ದೊಡ್ಡವಳು ಎಂಬ ಭಾವ ತೋರುತ್ತಿರಲಿಲ್ಲ. ನಮ್ಮನ್ನೆಲ್ಲಾ ಸಿನಿಮಾಕ್ಕೆ ಕರೆತರಬೇಕೆಂಬ ಆಸೆ ಆಕೆಯಲ್ಲಿತ್ತು’ ಭಾವಪೂರ್ಣವಾಗಿ ಮಾತನಾಡಿ‌ದ್ದಾರೆ ಮಧುರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT