ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್‌ ಇಬ್ರಾಹಿಂ ಸಹೋದರ ಇಕ್ಬಾಲ್‌ ಕಾಸ್ಕರ್‌ ಬಂಧನ

Last Updated 18 ಸೆಪ್ಟೆಂಬರ್ 2017, 20:04 IST
ಅಕ್ಷರ ಗಾತ್ರ

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್‌ ಕಾಸ್ಕರ್‌ನನ್ನು ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಹಣ ಸುಲಿಗೆ ಪ್ರಕರಣದಲ್ಲಿ ಈತನನ್ನು ಮುಂಬೈನ ನಾಗಪಾಡದ ಆತನ ನಿವಾಸದಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಠಾಣೆಯ ಎಇಸಿ ಘಟಕದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಎನ್‌ಕೌಂಟರ್‌ ಖ್ಯಾತಿಯ ಪ್ರದೀಪ್‌ ಶರ್ಮಾ ನೇತೃತ್ವದ ತಂಡವು ಈತನನ್ನು ಬಂಧಿಸಿದೆ.

‌ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸಿಸುವ ಇಕ್ಬಾಲ್‌ ಉದ್ಯಮಿಗಳಿಗೆ ಸಹೋದರ ದಾವೂದ್‌ ಇಬ್ರಾಹಿಂ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ನೀಡುವಂತೆ ಬೆದರಿಸುತ್ತಿದ್ದ. ಇದಕ್ಕೆ ಹೆದರಿದ, ಠಾಣೆ, ಉಲ್ಲಾಸ್‌ನಗರ, ದೊಂಬಿವಿಲಿಯ ಅನೇಕ ಬಿಲ್ಡರ್‌ಗಳು ದೊಡ್ಡದ ಮೊತ್ತದ ಹಣವನ್ನು ಕಸ್ಕರ್‌ಗೆ ಪಾವತಿಸಿದ್ದರು. ಇತ್ತೀಚಿಗೆ ನೋಟು ಅಪನಗದೀಕರಣದಿಂದ ದೊಡ್ಡ ಮೊತ್ತದ ಸಾಲ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಒಬ್ಬ ಬಿಲ್ಡರ್‌, ಕಸ್ಕರ್‌ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಎಎಸಿ ತಂಡವು ಕಸ್ಕರ್‌ನನ್ನು ಬಂಧಿಸಿದೆ.

ಇಕ್ಬಾಲ್‌ನನ್ನು ದಶಕದ ಹಿಂದೆ ಕೊಲ್ಲಿ ದೇಶದಿಂದ ಗಡೀಪಾರು ಮಾಡಲಾಗಿತ್ತು. ಇದಾದ ನಂತರ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT