ಶಾಂತಿ ಕದಡುವ ಷಾ ಭೇಟಿ: ಸಚಿವ ತಿಮ್ಮಾಪುರ

ಮಂಗಳವಾರ, ಜೂನ್ 25, 2019
30 °C

ಶಾಂತಿ ಕದಡುವ ಷಾ ಭೇಟಿ: ಸಚಿವ ತಿಮ್ಮಾಪುರ

Published:
Updated:
ಶಾಂತಿ ಕದಡುವ ಷಾ ಭೇಟಿ: ಸಚಿವ ತಿಮ್ಮಾಪುರ

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭೇಟಿಯಿಂದ ರಾಜ್ಯಕ್ಕೆ ಶಾಂತಿಯಂತೂ ಸಿಗುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸೋಮವಾರ ಇಲ್ಲಿ ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬರುತ್ತಾರೆ; ಮತ್ತೊಬ್ಬರೂ ಬರುತ್ತಾರೆ. ಆದರೆ, ಅವರು ಬಂದರೆ ಉದ್ವಿಗ್ನ ಸ್ಥಿತಿ ನಿರ್ಮಿಸಿ ವಾತಾವರಣ ಹದಗೆಡಿಸುತ್ತಾರೆ’ ಎಂದು ಆರೋಪಿಸಿದರು.

'ಇವರು ಬರುತ್ತಾರೆ ಎಂದರೆ ಸಾವಿರ ಪೊಲೀಸರನ್ನು ನಿಲ್ಲಿಸಬೇಕು. ಧ್ವಜ ಹಿಡಿದುಕೊಂಡು ಅಶಾಂತಿ ಸೃಷ್ಟಿಸುವವರಿಗೆ ಚುನಾವಣೆ ಹತ್ತಿರ ಬಂದಾಗಷ್ಟೇ ರಾಜ್ಯದ ಅಭಿವೃದ್ಧಿ ನೆನಪಾಗುತ್ತದೆ’ ಎಂದು ಟೀಕಿಸಿದರು.

ವಿದೇಶಗಳಲ್ಲಿ ಭಾಷಣ ಮಾಡುವ ಬದಲು ದೇಶದ ಅಭಿವೃದ್ಧಿ ಕಡೆಗೆ ಪ್ರಧಾನಿ ಹಚ್ಚಿನ ಗಮನ ಹರಿಸಬೇಕು ಎಂದ ಸಚಿವರು, ‘ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ; ಕೇವಲ ಭಾಷಣದಿಂದ ದೇಶ ಉದ್ಧಾರ ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry