ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಮೇಲೆ ಆರ್‌ಬಿಐ ನೀತಿ ಪ್ರಭಾವ

Last Updated 2 ಅಕ್ಟೋಬರ್ 2017, 19:33 IST
ಅಕ್ಷರ ಗಾತ್ರ

ನವದೆಹಲಿ: ಅಲ್ಪಾವಧಿ ಬಡ್ಡಿ ದರ ನಿಗದಿಪಡಿಸುವ ಆರ್‌ಬಿಐ ಸಭೆ, ತಯಾರಿಕೆ ಮತ್ತು ಸೇವಾ ವಲಯದ ಅಂಕಿ ಅಂಶ,  ಕಚ್ಚಾ ತೈಲದ ಬೆಲೆ ಮತ್ತು ವಿದೇಶಿ ಹೂಡಿಕೆದಾರರು ತಳೆಯಲಿರುವ ಧೋರಣೆಯು ಈ ವಾರ ದೇಶಿ ಷೇರುಪೇಟೆಯ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಆರ್‌ಬಿಐ ನಿರ್ಧಾರವನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಸೆಪ್ಟೆಂಬರ್‌ ತಿಂಗಳಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ ಮತ್ತು ‘ನಿಫ್ಟಿ’ ಮೂರು ವಾರಗಳ ವಹಿವಾಟಿನಲ್ಲಿ ಕುಸಿತ ದಾಖಲಿಸಿವೆ. ಇವೆರಡೂ ಸೂಚ್ಯಂಕಗಳು ಕ್ರಮವಾಗಿ 638 ಮತ್ತು 175 ಅಂಶಗಳಷ್ಟು ಕುಸಿತ ಕಂಡಿವೆ.

ಕಳೆದ ವಾರ ಕಚ್ಚಾ ತೈಲ ಬೆಲೆ ಏರಿಕೆಯಾಗಿತ್ತು. ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕುಸಿತ ಕಂಡಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದರು. ದೇಶಿ ಸಾಂಸ್ಥಿಕ ಹೂಡಿಕೆದಾರರು ಮಾತ್ರ ಪೇಟೆಯ ಬೆಂಬಲಕ್ಕೆ ನಿಂತಿದ್ದರು. ಸೆಪ್ಟೆಂಬರ್ ತಿಂಗಳಿನಲ್ಲಿ ‘ಎಫ್‌ಐಐ’ಗಳು ಪೇಟೆಯಿಂದ ₹ 11 ಸಾವಿರ ಕೋಟಿ ಹೊರಗೆ ಸಾಗಿಸಿವೆ.

‘ತ್ರೈಮಾಸಿಕ ಹಣಕಾಸು ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇದ್ದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪೇಟೆ ಕಡೆಗೆ ಮತ್ತೆ ಮುಖ ಮಾಡಲಿದ್ದಾರೆ’ ಎಂದು  ಅರಿಹಂತ್‌ ಕ್ಯಾಪಿಟಲ್‌ ಮಾರ್ಕೆಟ್ಸ್‌ನ ನಿರ್ದೇಶಕಿ ಅನಿತಾ ಗಾಂಧಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT