ಸೂಕಿಗೆ ನೀಡಿದ್ದ ಗೌರವ ವಾಪಸ್

ಬುಧವಾರ, ಜೂನ್ 19, 2019
31 °C

ಸೂಕಿಗೆ ನೀಡಿದ್ದ ಗೌರವ ವಾಪಸ್

Published:
Updated:
ಸೂಕಿಗೆ ನೀಡಿದ್ದ ಗೌರವ ವಾಪಸ್

ಲಂಡನ್‌: ಮ್ಯಾನ್ಮಾರ್‌ ನಾಯಕಿ ಅಂಗ್‌ ಸಾನ್‌ ಸೂಕಿ ಅವರಿಗೆ ನೀಡಿದ್ದ ‘ಫ್ರೀಡಂ ಆಫ್‌ ಆಕ್ಸ್‌ಫರ್ಡ್‌’ ಗೌರವವನ್ನು ಆಕ್ಸಫರ್ಡ್‌ ನಗರ ಆಡಳಿತ ಮಂಡಳಿ ವಾಪಸ್‌ ಪಡೆದುಕೊಂಡಿದೆ.

ಪ್ರಜಾಪ್ರಭುತ್ವಕ್ಕಾಗಿ ದೀರ್ಘಕಾಲ ಹೋರಾಟ ಮಾಡಿದ ಕಾರಣಕ್ಕೆ ಸೂಕಿ ಅವರಿಗೆ 1997ರಲ್ಲಿ ಈ ಗೌರವ ನೀಡಲಾಗಿತ್ತು.

ರೋಹಿಂಗ್ಯಾ ಮುಸ್ಲಿಮರ ಕುರಿತು ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆಕ್ಸ್‌ಫರ್ಡ್‌ ನಗರ ಆಡಳಿತ ಮಂಡಳಿ, ಸೂಕಿ ಅವರಿಗೆ ಈ ಗೌರವವನ್ನು ಮುಂದುವರಿಸುವುದು ಸೂಕ್ತವಲ್ಲ ಎಂಬ ನಿರ್ಣಯ ಕೈಗೊಂಡಿದೆ.

ಸೂಕಿ ಅವರು ಸಿಟಿ ಆಫ್‌ ಆಕ್ಸ್‌ಫರ್ಡ್‌ ನಗರದ ಜತೆ ಅತಿ ಹೆಚ್ಚು ಸಂಪರ್ಕ ಹೊಂದಿದ್ದರು.  ಇಲ್ಲಿನ ಪಾರ್ಕ್‌ ಟೌನ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದ ಅವರು 1964ರಿಂದ 67ರ ವರೆಗೆ ಸೆಂಟ್ ಹ್ಯೂಜ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry