ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಆಗ್ಲೇ ಹಂಗೆ...

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

* ಸಿನಿಮಾಗೆ ಬರಲು ಕಾರಣ...
ನಾನು ರಂಗಭೂಮಿ ಕಲಾವಿದೆ, ವಿ ಮೂವ್ ಥಿಯೇಟರ್ ತಂಡದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ನಿರುಪಮಾ ರಾಜೇಂದ್ರ ಅವರ ಬಳಿ ಕಥಕ್ ನೃತ್ಯ ಕಲಿತಿದ್ದೇನೆ. ಕಲೆಯ ಬಗ್ಗೆ ಬಹಳ ಆಸಕ್ತಿ ಇತ್ತು. ಅದೇ ಸಮಯಕ್ಕೆ 'ರಂಗಿತರಂಗ' ಚಿತ್ರಕ್ಕೆ ಅವಕಾಶ ಸಿಕ್ಕಿತು, ಯಶಸ್ವಿಯೂ ಆಯಿತು. ಅಲ್ಲಿಂದ ಸಿನಿ ಪಯಣಕ್ಕೆ ಮುನ್ನುಡಿ ಬರೆದೆ.

* ಇಷ್ಟದ ತಿನಿಸು...
ನಾನು ಫುಡ್ಡಿ ಅಲ್ಲ, ಹಾಗಾಗಿ ಇಂಥದ್ದೇ ತಿನಿಸು ಇಷ್ಟ ಅಂಥ ಹೇಳೋದು ಕಷ್ಟ.

* ಇಷ್ಟದ ಹಾಡು...
ಬಹಳಷ್ಟು ಹಾಡುಗಳು ಮನವನ್ನು ಕಾಡುತ್ತವೆ. ಲಕ್ಷ್ಮಿ ಅಭಿನಯದ ಹಾಡುಗಳು ಇಷ್ಟ. ‘ನಗು ಎಂದಿದೆ ಮಂಜಿನ ಬಿಂದು’ ಹಾಡು ಬಹಳ ಇಷ್ಟವಾಗುತ್ತದೆ.

* ಟೆನ್ಷನ್ ಹೆಚ್ಚಾದಾಗ...
ಸಂಗೀತ ಕೇಳ್ತೀನಿ, ಮನೆಯಲ್ಲಿ ಒಬ್ಬಳೇ ಕೂರ್ತೀನಿ.

* ಬಿಡುವಿದ್ದರೆ...
ಹಲವಾರು ಚಿತ್ರಗಳು ಕೈಯಲ್ಲಿರುವುದರಿಂದ ಬಿಡುವಿನ ಮಾತೇ ಇಲ್ಲ. ಸಮಯ ಸಿಕ್ಕರೆ ಸದಭಿರುಚಿಯ ಚಿತ್ರಗಳನ್ನು ನೋಡುತ್ತೇನೆ. ಸಂಗೀತ ಕೇಳ್ತೀನಿ. ಪುಸ್ತಕ ಓದ್ತೀನಿ.

* ಮುಂದಿನ ಚಿತ್ರಗಳು...
ನರೇಂದ್ರ ಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ರಾಜೇಶ್‌ ನಿರ್ದೇಶನದ ‘ಅಸತೋಮ ಸದ್ಗಮಯ’, ಹರಿ ಆನಂದ್‌ ನಿರ್ದೇಶನದ ‘ಚೇಸ್‌’ ಚಿತ್ರಗಳು ಚಿತ್ರೀಕರಣವಾಗುತ್ತಿವೆ.

* ಶೂಟಿಂಗ್ ನೆನಪು...
‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ಅನಂತನಾಗ್‌ ಅವರ ಜೊತೆ ನಟಿಸುತ್ತಿರುವುದು ನನ್ನ ಸಿನಿಪಯಣದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ಅವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುವುದು ವಿಶ್ವವಿದ್ಯಾಲಯದಲ್ಲಿ ಕಲಿತಂತೆ.

* ಫಿಟ್‌ನೆಸ್ ಮಂತ್ರ...
ದಿನಕ್ಕೆ ಒಂದು ಗಂಟೆ ಯೋಗ. ನೋ ಡಯೆಟ್‌. ಸಿಹಿ ತಿನ್ನೋದು ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT