ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಎದುರಾಳಿ ದಕ್ಷಿಣ ಆಫ್ರಿಕಾ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಎರಡನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವ ಚಾಂಪಿಯನ್‌ಷಿಪ್‌ 2017ರಿಂದ 2020ರವರೆಗೆ ಜರುಗಲಿದೆ.

ಭಾರತ ತಂಡದವರು ಫೆಬ್ರುವರಿ 5ರಿಂದ 10ರವರೆಗೆ ನಿಗದಿಯಾಗಿರುವ ಮೊದಲ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿ ಆಡಲಿದ್ದಾರೆ.

ಮೊದಲ ಎರಡು ಪಂದ್ಯಗಳು ಕ್ರಮವಾಗಿ ಫೆಬ್ರುವರಿ 5 ಮತ್ತು 7ರಂದು ಕಿಂಬರ್ಲಿಯಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಪೋಷೆಫ್‌ಸ್ಟ್ರಾಮ್‌ನಲ್ಲಿ ನಿಗದಿಯಾಗಿದೆ.

ಈ ವರ್ಷದ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತಿದ್ದ ಮಿಥಾಲಿ ಪಡೆ ಆ ನಂತರ ಆಡುತ್ತಿರುವ ಮೊದಲ ಸರಣಿ ಇದಾಗಿದೆ.

2014 ರಿಂದ 16ರವರೆಗೆ ನಡೆದಿದ್ದ ಮೊದಲ ಆವೃತ್ತಿಯ ಚಾಂಪಿಯನ್‌ಷಿಪ್‌ನ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ಇದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌, ಭಾರತ, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಭಾಗವಹಿಸಲಿದೆ. ಎಲ್ಲಾ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗಲಿವೆ.

ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು 2021ರ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲಿವೆ. ಆತಿಥೇಯ ರಾಷ್ಟ್ರ ಎಂಬ ಕಾರಣಕ್ಕಾಗಿ ನ್ಯೂಜಿಲೆಂಡ್‌ ತಂಡಕ್ಕೂ ನೇರ ಅರ್ಹತೆ ಲಭಿಸಿದೆ.ಉಳಿದ ನಾಲ್ಕು ತಂಡಗಳು ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಸೆಣಸಲಿವೆ.

ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ತಂಡಗಳು ಎದುರಾಗಲಿವೆ. ಅಕ್ಟೋಬರ್‌ 11ರಿಂದ 15ರವರೆಗೆ ನಡೆಯುವ ಈ ಸರಣಿ ವಿಂಡೀಸ್‌ನಲ್ಲಿ ಆಯೋಜನೆಯಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಣ ಸರಣಿ ಅಕ್ಟೋಬರ್‌ 22ರಿಂದ 29ರವರೆಗೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT