ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನ ಎಂಡಿ ಬೇಡಿ ರಾಜೀನಾಮೆ

Last Updated 10 ಅಕ್ಟೋಬರ್ 2017, 19:42 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಸಂವಹನದ ದೈತ್ಯ ಜಾಲತಾಣ ಫೇಸ್‌ಬುಕ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್‌ ಬೇಡಿ ಅವರು ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ.

ಒಂದು ವರ್ಷದ ಹಿಂದೆಯಷ್ಟೇ ಅವರು ಈ ಹುದ್ದೆಗೆ ನೇಮಕಗೊಂಡಿದ್ದರು. ಬೇಡಿ ರಾಜೀನಾಮೆಯನ್ನು ಫೇಸ್‌ಬುಕ್‌ ಇಂಡಿಯಾ ಖಚಿತಪಡಿಸಿದೆ. ಈ ವರ್ಷಾಂತ್ಯಕ್ಕೆ ಅವರು ಈ ಹುದ್ದೆ ತೆರವುಗೊಳಿಸಲಿದ್ದಾರೆ ಎಂದು ತಿಳಿಸಿದೆ.

ಗ್ರಾಹಕರು ಮತ್ತು ಮಾಧ್ಯಮ (ದಕ್ಷಿಣ ಏಷ್ಯಾ) ವಿಭಾಗದ ನಿರ್ದೇಶಕರಾಗಿರುವ ಸಂದೀಪ್‌ ಭೂಷಣ್‌ ಅವರನ್ನು ಸದ್ಯಕ್ಕೆ ಹಂಗಾಮಿ ವ್ಯವಸ್ಥಾಪಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ.

ಅಮೆರಿಕದ ನಂತರ ಭಾರತದಲ್ಲಿಯೇ ಫೇಸ್‌ಬುಕ್‌ ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ವಿಶ್ವದಾದ್ಯಂತ 200 ಕೋಟಿ ಸಕ್ರಿಯ ಬಳಕೆದಾರರು ಇದ್ದರೆ, ಭಾರತದಲ್ಲಿನ ಬಳಕೆದಾರರ ಸಂಖ್ಯೆ 20 ಕೋಟಿಗೂ ಹೆಚ್ಚಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT