ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ‘ಎ’ ತಂಡಕ್ಕೆ ಮುನ್ನಡೆ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಅಭಿಮನ್ಯು ಈಶ್ವರನ್ (83) ಹಾಗೂ ಶಹಬಾಜ್ ನದೀಮ್ (33ಕ್ಕೆ4) ಅವರ ಅಮೋಘ ಆಟದಿಂದಾಗಿ ಭಾರತ ‘ಎ’ ತಂಡ ನ್ಯೂಜಿಲೆಂಡ್ ‘ಎ’ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವನ್ನು ಜಯಿಸಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2–0ಯಲ್ಲಿ ಮುನ್ನಡೆ ಪಡೆದಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 289 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಪಡೆ 45.1 ಓವರ್‌ಗಳಲ್ಲಿ 225 ರನ್ ಕಲೆಹಾಕುವಷ್ಟರಲ್ಲಿ ಸರ್ವಪತನಗೊಂಡಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಕಿವೀಸ್ ಪಡೆ 50 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಬಳಿಕ ಈ ತಂಡ ನಡೆಸಿದ ಹೋರಾಟದಿಂದ ಜಯದ ಸಮೀಪ ತಲುಪಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಜಾರ್ಜ್ ವೋರ್ಕರ್ (108) ಕಿವೀಸ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇವರಿಗೆ ಅಲ್ಪಆಸರೆಯಾದರು. 113 ಎಸೆತಗಳನ್ನು ಎದುರಿಸಿ ವೋರ್ಕರ್‌ 11 ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. ಹೆನ್ರಿ ನಿಕೋಲ್ 42 ಎಸೆತಗಳಿಗೆ 37 ರನ್‌ಗಳಿಸಿದರು.

ಆದರೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್ ದಾಖಲಿಸಲಿಲ್ಲ. ನ್ಯೂಜಿಲೆಂಡ್ ಬಳಗದಲ್ಲಿ ಹೆಚ್ಚು ರನ್ ಗಳಿಸಿದ್ದ ವೋರ್ಕರ್ ಹಾಗೂ ನಿಕೊಲ್ ಅವರ ವಿಕೆಟ್ ಪಡೆದ ನದೀಮ್ ಅಂಗಳದಲ್ಲಿ ಮಿಂಚು ಹರಿಸಿದರು. 33 ರನ್‌ಗಳನ್ನು ನೀಡಿದ ಭಾರತದ ಬೌಲರ್ ನಾಲ್ಕು ವಿಕೆಟ್ ಕಬಳಿಸಿದರು.

ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡಕ್ಕೆ ಈಶ್ವರನ್ ಅಮೋಘ ಆರಂಭ ನೀಡಿದ್ದರು. 104 ಎಸೆತಗಳಲ್ಲಿ ಈ ಆಟಗಾರ ಏಳು ಬೌಂಡರಿಗಳನ್ನು ಬಾರಿಸಿದರು.

ಮಧ್ಯಮ ಕ್ರಮಾಂಕ ಬಲ ಕಳೆದುಕೊಂಡಾಗ ದೀಪಕ್ ಹೂಡ (59) ಅರ್ಧಶತಕದಿಂದ ಆಸರೆಯಾದರು. ವಿಜಯ್ ಶಂಕರ್ 61 ರನ್ ಗಳಿಸಿ ರನ್ ಹೊಳೆ ಹರಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ ’ಎ’: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 289 (ಅಭಿಮನ್ಯು ಈಶ್ವರನ್‌ 83, ದೀಪಕ್ ಹೂಡಾ 59, ವಿಜಯ್ ಶಂಕರ್‌ 61). ನ್ಯೂಜಿಲೆಂಡ್ ‘ಎ’: 45.1 ಓವರ್‌ಗಳಲ್ಲಿ 225 (ಜಾರ್ಜ್ ವೋರ್ಕರ್ 108, ಹೆನ್ರಿ ನಿಕೊಲಸ್‌ 37; ಶಹಬಾಜ್ ನದೀಮ್ 33ಕ್ಕೆ4, ಶಾರ್ದೂಲ್ ಠಾಕೂರ್ 41ಕ್ಕೆ2). ಫಲಿತಾಂಶ: ಭಾರತಕ್ಕೆ 64 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT