ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕೆರೆಯಂಗಳದ ಒತ್ತುವರಿ ತೆರವು ಆರಂಭ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಯಂಗಳದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರ ಜಿಲ್ಲಾಡಳಿತ ಮತ್ತೆ ಆರಂಭಿಸಿದ್ದು, ಶುಕ್ರವಾರ ಐದು ತಾಲ್ಲೂಕುಗಳಲ್ಲಿ 104 ಎಕರೆಯನ್ನು ಸ್ವಾಧೀನಕ್ಕೆ ಪಡೆದಿದೆ.

ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ₹105 ಕೋಟಿ ಮೌಲ್ಯದ ಜಾಗವನ್ನು ವಶಕ್ಕೆ ಪಡೆಯಲಾಯಿತು. ಜಿಲ್ಲಾಡಳಿತ ಎರಡೂವರೆ ವರ್ಷಗಳ ಹಿಂದೆ ಸಾರಕ್ಕಿ ಕೆರೆ, ಬಾಣಸವಾಡಿ ಕೆರೆಯಂಗಳದಲ್ಲಿದ್ದ ಕಟ್ಟಡಗಳನ್ನು ನೆಲಸಮ ಮಾಡಿತ್ತು. ಕಟ್ಟಡ ನೆಲಸಮಕ್ಕೆ ವಿರೋಧ ವ್ಯಕ್ತವಾಗಿತ್ತು. ಕೆರೆ ಜಾಗದಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಬಾರದು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಜಿಲ್ಲಾಡಳಿತದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಜಲಮೂಲಗಳು ಉಕ್ಕಿ ಹರಿಯುತ್ತಿವೆ. ಒತ್ತುವರಿಯಿಂದಾಗಿ ಪ್ರವಾಹ ಉಂಟಾಗುತ್ತಿದೆ. ಈ ಒತ್ತುವರಿಗಳನ್ನು ತೆರವು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಪ್ರಕ್ರಿಯೆ ಪ್ರತಿ ಶನಿವಾರ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಉತ್ತರ ತಾಲ್ಲೂಕಿನ ಹುಣ್ಣಿಗೆರೆ ಸರ್ಕಾರಿ ಕೆರೆ ಸರ್ವೆ ನಂ.16 ರಲ್ಲಿ 1 ಎಕರೆ 15 ಗುಂಟೆ, ಕುಕ್ಕನಹಳ್ಳಿ ಗ್ರಾಮದ ಕೆರೆ ಸರ್ವೆ ನಂ. 142 ರಲ್ಲಿ 22 ಗುಂಟೆ ಜಮೀನಿಗೆ ಬೇಲಿ ಹಾಕಲಾಯಿತು. ಯಲಹಂಕ ತಾಲ್ಲೂಕಿನ ತರಹುಣಸೆ ಗ್ರಾಮದ ಕೆರೆ ಸರ್ವೆ ನಂ.100 ರಲ್ಲಿ 28 ಗುಂಟೆ, ಸರ್ವೆ ನಂ. 154 ರಲ್ಲಿ 20 ಗುಂಟೆ, ತಿಮ್ಮಸಂದ್ರ ಗ್ರಾಮದ ಸರ್ವೆ ನಂ.10 ರಲ್ಲಿ 36 ಗುಂಟೆ ಜಮೀನನ್ನು ವಶಕ್ಕೆ ಪಡೆಯಲಾಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಗ್ರಾಮದ ಕೆರೆ ಕೋಡಿ ಸರ್ವೆ ನಂ. 9 ರಲ್ಲಿ 10 ಗುಂಟೆ, ನೆಟ್ಟಗೆರ ಗ್ರಾಮದ ಸರ್ವೆ ನಂ. 46 ರಲ್ಲಿ 10 ಗುಂಟೆ, ರಾವಗೊಡ್ಲು ಗ್ರಾಮದ ಸರ್ವೆ ನಂ.5 ರಲ್ಲಿ 1 ಎಕರೆ 14 ಗುಂಟೆ ಜಾಗಕ್ಕೆ  ಬೇಲಿ ಹಾಕಲಾಯಿತು. ಹುಳಿಮಾವು ಗ್ರಾಮದ ಸರ್ಕಾರಿ ಖರಾಬು ಸರ್ವೆ ನಂ.1 ರಲ್ಲಿ 4 ಎಕರೆ 31 ಗುಂಟೆ ಜಮೀನನ್ನು ವೇಣುಗೋಪಾಲ್‌ ಎಂಬವರು ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡಗಳು ಮತ್ತು ಮನೆಗಳನ್ನು ನಿರ್ಮಿಸಿದ್ದರು. ಈ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಯಿತು.

ಬೆಂಗಳೂರು ಪೂರ್ವ ತಾಲ್ಲೂಕಿನ ಚೀಮಸಂದ್ರ ಗ್ರಾಮದ ಕೆರೆ ಸರ್ವೆ ನಂ. 34 ರಲ್ಲಿ 26 ಎಕರೆ 20 ಗುಂಟೆ, ಬೈಯ್ಯಪ್ಪನಹಳ್ಳಿ ಗ್ರಾಮದ ಕೆರೆ ಸರ್ವೆ ನಂ. 8 ರಲ್ಲಿ 31 ಎಕರೆ 27 ಗುಂಟೆ, ಗುಂಡೂರು ಗ್ರಾಮದ ಕೆರೆ ಸರ್ವೆ ನಂ.9 ರಲ್ಲಿ 25 ಎಕರೆ 20 ಗುಂಟೆ ವಶಪಡಿಸಿಕೊಳ್ಳಲಾಯಿತು.

ಆನೇಕಲ್ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಸರ್ವೆ ನಂ. 24 ರಲ್ಲಿ 2 ಎಕರೆ 10 ಗುಂಟೆ, ಎಸ್.ಮೇಡಹಳ್ಳಿ ಗ್ರಾಮದ ಸರ್ವೆ ನಂ. 158 ರಲ್ಲಿ 6 ಎಕರೆ 25 ಗುಂಟೆ, ಕೊಮ್ಮಸಂದ್ರ ಗ್ರಾಮದ ಸರ್ವೆ ನಂ.133 ರಲ್ಲಿ 2 ಎಕರೆ 28 ಗುಂಟೆ, ನೊಸೆನೂರು ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ 22 ರಲ್ಲಿ 5 ಗುಂಟೆ, ಕರ್ಪೂರ ಗ್ರಾಮದ ಸರ್ಕಾರಿ ಕುಂಟೆ ಸರ್ವೆ ನಂ.52 ರಲ್ಲಿ 33 ಗುಂಟೆ, ಮರಸೂರು ಗ್ರಾಮದ ಸರ್ವೆ ನಂ.2 ಎಕರೆ 3 ಗುಂಟೆ ಸ್ವಾಧೀನಕ್ಕೆ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT