ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ರೈಲ್ವೆಯಲ್ಲಿ ಸಿಗಲಿದೆ ವಿಮಾನದಲ್ಲಿ ನೀಡುವಂತ ಆಹಾರ; ಬೆಲೆಯೂ ಜಾಸ್ತಿ!

Last Updated 14 ಅಕ್ಟೋಬರ್ 2017, 8:42 IST
ಅಕ್ಷರ ಗಾತ್ರ

ನವದೆಹಲಿ: ರೈಲಿನಲ್ಲಿ ನೀಡುವ ಆಹಾರದ ಗುಣಮಟ್ಟ ಉತ್ತಮಗೊಳಿಸುವ ಸಲುವಾಗಿ ಮೆನು ಬದಲಾವಣೆ ಮಾಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.

ಬಲ್ಲಮೂಲಗಳ ಪ್ರಕಾರ ಭಾರತೀಯ ರೈಲ್ವೆ ವಿಮಾನದಲ್ಲಿ ನೀಡಿವಂತ ಗಟ್ಟಿ ಆಹಾರಗಳನ್ನು ಮಾತ್ರ ನೀಡಲು ತೀರ್ಮಾನಿಸಿದೆ. ಅಂದರೆ ಯಾವುದೇ ಆಹಾರಗಳು ದ್ರವ ಮಿಶ್ರಿತ ಆಹಾರಗಳನ್ನು ಇಲ್ಲಿ  ನೀಡಲಾಗುವುದಿಲ್ಲ.

ರೈಲ್ವೆ ಸಮಿತಿ ಈ ಹೊಸ ಮೆನುವಿನ ಬಗ್ಗೆ ರೈಲ್ವೆ ಮಂಡಳಿಗೆ ವರದಿ ಸಲ್ಲಿಸಿದ್ದು, ಈ ಬಗ್ಗೆ ಮಂಡಳಿ ಶೀಘ್ರದಲ್ಲೇ ತಮ್ಮ ತೀರ್ಮಾನ ಪ್ರಕಟಿಸಲಿದೆ.
ಆದಾಗ್ಯೂ, ಹೊಸ ಮೆನುವಿನಲ್ಲಿರುವ ಆಹಾರಗಳಿಗೆ ಪ್ರಯಾಣಿಕರು ಹೆಚ್ಚಿನ ಬೆಲೆ ತೆರಬೇಕಾಗಿ ಬರುತ್ತದೆ.

ರೆಡಿ ಟು ಈಟ್ ಐಟಂಗಳನ್ನೇ ನೀಡಬೇಕು ಎಂದು ರೈಲ್ವೆ ಸಮಿತಿ ಒತ್ತಾಯಿಸಿದ್ದು, ವೆಜಿಟೇಬಲ್ ಬಿರಿಯಾನಿ, ರಾಜ್ಮಾ ಚಾವಲ್, ಹಕ್ಕಾ ನೂಡಲ್ಸ್, ಪುಲಾವ್  ಮತ್ತು ಲಡ್ಡು  ಈ ಹೊಸ ಮೆನುವಿನಲ್ಲಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT