ಭಾನುವಾರ, ಸೆಪ್ಟೆಂಬರ್ 22, 2019
22 °C

ಕ್ರಿಕೆಟ್‌: ಕರ್ನಾಟಕ–ಆಂಧ್ರ ಪೈಪೋಟಿ

Published:
Updated:

ಹುಬ್ಬಳ್ಳಿ: ಕರ್ನಾಟಕ ಮತ್ತು ಆಂಧ್ರ ತಂಡಗಳ ನಡುವಣ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ನಾಲ್ಕು ದಿನಗಳ ಕ್ರಿಕೆಟ್‌ ಪಂದ್ಯ ಭಾನುವಾರ ಆರಂಭವಾಗಲಿದೆ.

 ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಯಾಗಿದ್ದು, ಮಳೆಯ ಭೀತಿ ಎದುರಾಗಿದೆ.

ಶನಿವಾರ ಸಂಜೆಯಿಂದ ಸುರಿದ ಮಳೆಗೆ ಮೈದಾನದಲ್ಲೆಲ್ಲಾ ನೀರು ನಿಂತುಕೊಂಡಿತ್ತು. ಆದ್ದರಿಂದ ಕರ್ನಾಟಕ ತಂಡದವರು ಕೆಲವೇ ನಿಮಿಷ ಅಭ್ಯಾಸ ಮಾಡಿದರು. ಮಧ್ಯಾಹ್ನ ಆಂಧ್ರ ತಂಡದವರು ದೈಹಿಕ ಕಸರತ್ತಿಗೆ ಒತ್ತುಕೊಟ್ಟರು.

ರಾಜ್ಯ ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಬಲಿಷ್ಠವಾಗಿದ್ದು ಆಂಧ್ರ ತಂಡವನ್ನು ಸುಲಭವಾಗಿ ಕಟ್ಟಿಹಾಕುವ ವಿಶ್ವಾಸ ಹೊಂದಿದೆ. ಉಭಯ ತಂಡಗಳ ನಡುವಣ ಈ ಪಂದ್ಯದ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ.

Post Comments (+)