ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೇಸ್‌ಗೆ ಸಂಕಟ ತಂದ ದೆಹಲಿ

ರಣಜಿ ಟ್ರೋಫಿ: ಇಶಾಂತ್‌ ಶರ್ಮಾ ಪರಿಣಾಮಕಾರಿ ದಾಳಿ; ಮನನ್‌ ಶರ್ಮಾಗೆ ಶತಕ
Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೆಹಲಿ (ಪಿಟಿಐ): ವೇಗಿ ಇಶಾಂತ್ ಶರ್ಮಾ ಮತ್ತೊಮ್ಮೆ ಮಿಂಚಿನ ದಾಳಿ ನಡೆಸಿದರು. ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೋಘ ಆಟವಾಡಿದ ಅವರು ಎರಡನೇ ಪಂದ್ಯದಲ್ಲೂ ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಅವರ ಪರಿಣಾಮಕಾರಿ ದಾಳಿಗೆ ಒಳಗಾದ ರೈಲ್ವೇಸ್‌ ತಂಡ 58 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

‘ಎ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 447 ರನ್ ಗಳಿಸಿದ ದೆಹಲಿ ತಂಡ ಎದುರಾಳಿಗಳು 58 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದೆ. ಇಶಾಂತ್ ಶರ್ಮಾ ಮೂರು ಮತ್ತು ಮನನ್ ಶರ್ಮಾ ಎರಡು ವಿಕೆಟ್‌ ಪಡೆದರು. ಜಡೇಜಗೆ ದ್ವಿಶತಕ: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ಎದುರಿನ ‘ಬಿ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರದ ರವೀಂದ್ರ ಜಡೇಜ ದ್ವಿಶತಕ ದಾಖಲಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಎ ಗುಂಪು

ದೆಹಲಿ: 144.4 ಓವರ್‌ಗಳಲ್ಲಿ 447; ರೈಲ್ವೇಸ್‌: 33 ಓವರ್‌ಗಳಲ್ಲಿ 5ಕ್ಕೆ58 (ಇಶಾಂತ್ ಶರ್ಮಾ 12ಕ್ಕೆ3, ಮನನ್ ಶರ್ಮಾ 18ಕ್ಕೆ2).

ಬಿ ಗುಂಪು: ರಾಜಸ್ತಾನ್‌: 141.5 ಓವರ್‌ಗಳಲ್ಲಿ 423; ಜಾರ್ಖಂಡ್‌: 31 ಓವರ್‌ಗಳಲ್ಲಿ 2ಕ್ಕೆ97 (ಸೌರಭ್ ತಿವಾರಿ ಔಟಾಗದೆ 56). ಸೌರಾಷ್ಟ್ರ: 135 ಓವರ್‌ಗಳಲ್ಲಿ 7ಕ್ಕೆ 624 (ಶೆಲ್ಡನ್ ಜಾಕ್ಸನ್‌ 181, ರವೀಂದ್ರ ಜಡೇಜ 201); ಜಮ್ಮು ಮತ್ತು ಕಾಶ್ಮೀರ: 46.5 ಓವರ್‌ಗಳಲ್ಲಿ 4ಕ್ಕೆ 103 (ಶುಭಂ ಖಜೂರಿಯ 41). ಕೇರಳ: 66.5 ಓವರ್‌ಗಳಲ್ಲಿ 208ಕ್ಕೆ ಆಲೌಟ್‌; ಗುಜರಾತ್‌: 106 ಓವರ್‌ಗಳಲ್ಲಿ 9ಕ್ಕೆ307. ಸಿ ಗುಂಪು: ಬರೋಡ: 128 ಓವರ್‌ಗಳಲ್ಲಿ 373ಕ್ಕೆ ಆಲೌಟ್‌; ಆಂಧ್ರಪ್ರದೇಶ: 46 ಓವರ್‌ಗಳಲ್ಲಿ 2ಕ್ಕೆ 190; ರಿಕ್ಕಿ ಭುಯಿ ಔಟಾಗದೆ 53. ಮಧ್ಯಪ್ರದೇಶ: 144.3 ಓವರ್‌ಗಳಲ್ಲಿ 409ಕ್ಕೆ ಆಲೌಟ್‌; ಮುಂಬೈ: 33 ಓವರ್‌
ಗಳಲ್ಲಿ 1ಕ್ಕೆ130. ತ್ರಿಪುರ: 96.1 ಓವರ್‌
ಗಳಲ್ಲಿ 258ಕ್ಕೆ ಆಲೌಟ್‌; ತಮಿಳುನಾಡು: 81 ಓವರ್‌ಗಳಲ್ಲಿ 2ಕ್ಕೆ 332.

ಡಿ ಗುಂಪು: 147.3 ಓವರ್‌ಗಳಲ್ಲಿ 7ಕ್ಕೆ529; ಛತ್ತೀಸಗಡ: 31 ಓವರ್‌ಗಳಲ್ಲಿ 5ಕ್ಕೆ80 (ಅಶುತೋಷ್ ಸಿಂಗ್‌ ಔಟಾಗದೆ 51; ಅಶೋಕ್‌ ದಿಂಡಾ 6ಕ್ಕೆ2, ಮಹಮ್ಮದ್‌ ಶಮಿ 33ಕ್ಕೆ2); ಪಂಜಾಬ್‌: 42.2 ಓವರ್‌ಗಳಲ್ಲಿ 161ಕ್ಕೆ ಆಲೌಟ್‌ (ಲಲಿತ್‌ ಯಾದವ್ 47ಕ್ಕೆ3, ಸಿದ್ದೇಶ್‌ ನೇರಲ್‌ 48ಕ್ಕೆ3); ವಿದರ್ಭ: 130 ಓವರ್‌ಗಳಲ್ಲಿ 5ಕ್ಕೆ 419 (ಸಂಜಯ್‌ ರಾಮಸ್ವಾಮಿ 161, ಗಣೇಶ್ ಸತೀಶ್‌ ಔಟಾಗದೆ 126); ಗೋವಾ: 85.5 ಓವರ್‌ಗಳಲ್ಲಿ 255ಕ್ಕೆ ಆಲೌಟ್‌; ಹಿಮಾಚಲ ಪ್ರದೇಶ: 92 ಓವರ್‌ಗಳಲ್ಲಿ 4ಕ್ಕೆ356 (ಪ್ರಿಯಾಂಶು ಖಂಡೂರಿ 117, ಅಂಕುಶ್ ಬೇನ್ಸ್‌ 143).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT