ಬುಲ್ಸ್‌ಗೆ ಜಯದ ಭರವಸೆ

ಬುಧವಾರ, ಜೂನ್ 19, 2019
31 °C

ಬುಲ್ಸ್‌ಗೆ ಜಯದ ಭರವಸೆ

Published:
Updated:
ಬುಲ್ಸ್‌ಗೆ ಜಯದ ಭರವಸೆ

ಪುಣೆ : ಎರಡು ದಿನಗಳ ಹಿಂದೆಯಷ್ಟೇ ಯು.ಪಿ.ಯೋಧಾವನ್ನು ಮಣಿಸಿದ ಬೆಂಗಳೂರು ಬುಲ್ಸ್‌ ಮಂಗಳವಾರ ನಡೆಯುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮತ್ತೊಮ್ಮೆ ಇದೇ ತಂಡವನ್ನು ಎದುರಿಸಲಿದೆ.

20 ಪಂದ್ಯಗಳಿಂದ ಏಳು ಜಯದೊಂದಿಗೆ 49 ಪಾಯಿಂಟ್ ಗಳಿಸಿರುವ ಬುಲ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಯು.ಪಿ.ಯೋಧಾ ಭಾನುವಾರದ ಪಂದ್ಯದಲ್ಲಿ ಬುಲ್ಸ್ ಎದುರು ಸೋತಿದ್ದರೂ ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆದಿದೆ. ಆದ್ದರಿಂದ ಮಂಗಳವಾರದ ಪಂದ್ಯದ ಫಲಿತಾಂಶ ಉಭಯ ತಂಡಗಳಿಗೂ ಮಹತ್ವದ್ದಲ್ಲ.

ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ ಸೆಣಸಲಿದೆ.

19 ಪಂದ್ಯಗಳಿಂದ 14 ಜಯದೊಂದಿಗೆ 73 ಪಾಯಿಂಟ್ ಕಲೆ ಹಾಕಿರುವ ಪಲ್ಟನ್‌ 21 ಪಂದ್ಯಗಳಿಂದ 12 ಜಯದ ಮೂಲಕ 74 ಪಾಯಿಂಟ್  ಗಳಿಸಿರುವ ಸ್ಟೀಲರ್ಸ್ ವಿರುದ್ಧ ಜಯದ ಭರವಸೆಯಲ್ಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry