ಕೇಕ್‌ನಲ್ಲಿ ಮಿಂದೆದ್ದ ಹಾರ್ದಿಕ್ ಪಾಂಡ್ಯ

ಬುಧವಾರ, ಜೂನ್ 19, 2019
22 °C

ಕೇಕ್‌ನಲ್ಲಿ ಮಿಂದೆದ್ದ ಹಾರ್ದಿಕ್ ಪಾಂಡ್ಯ

Published:
Updated:
ಕೇಕ್‌ನಲ್ಲಿ ಮಿಂದೆದ್ದ ಹಾರ್ದಿಕ್ ಪಾಂಡ್ಯ

ನವದೆಹಲಿ: ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಕೇಕ್‌ನಲ್ಲಿ ಮಿಂದೆದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಅಕ್ಟೋಬರ್‌ 11ರಂದು ಪಾಂಡ್ಯ ಅವರಿಗೆ 24 ವರ್ಷ ತುಂಬಿದ ದಿನ. ಇದರ ಅಂಗವಾಗಿ ಹೋಟೆಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇಜಿನ ಮೇಲೆ ದೊಡ್ಡ ಕೇಕ್ ಕತ್ತರಿಸಿ ಇಡಲಾಗಿತ್ತು.

ಅದರ ಭಾಗಗಳನ್ನು ತೆಗೆದುಕೊಂಡು ಬಂದು ತಂಡದ ಸಹ ಆಟಗಾರರು ಪಾಂಡ್ಯ ಅವರಿಗೆ ಹಚ್ಚಿದರು. ಯಜುವೇಂದ್ರ ಚಾಹಲ್ ಅವರಂತೂ ಪಾಂಡ್ಯ ಅವರ ಇಡೀ ದೇಹಕ್ಕೆ ಕೇಕ್‌ ಮೆತ್ತಿದರು. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಅವರು ಕೇಕ್‌ನಲ್ಲಿ ಮುಳುಗಿದರು ಎಂದು ‘ಜೀ ನ್ಯೂಸ್’ ಸಂಸ್ಥೆ ಸುದ್ದಿ ಮಾಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry