ನಗರದ ಬೀದಿಗಳಲ್ಲಿ ಹೆಚ್ಚಿದ ತ್ಯಾಜ್ಯ

ಮಂಗಳವಾರ, ಜೂನ್ 25, 2019
23 °C
ಹೆಚ್ಚುವರಿಯಾಗಿ 700 ಟನ್‌ ಕಸ ಉತ್ಪತ್ತಿ

ನಗರದ ಬೀದಿಗಳಲ್ಲಿ ಹೆಚ್ಚಿದ ತ್ಯಾಜ್ಯ

Published:
Updated:
ನಗರದ ಬೀದಿಗಳಲ್ಲಿ ಹೆಚ್ಚಿದ ತ್ಯಾಜ್ಯ

ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬದ ವೇಳೆ ಹೆಚ್ಚುವರಿಯಾಗಿ ಶೇ 20ರಷ್ಟು ಕಸ ಉತ್ಪತ್ತಿಯಾಗಿದೆ.

‘ಪ್ರತಿದಿನ 4,000 ಟನ್‌ ಕಸ ಉತ್ಪತ್ತಿಯಾಗುತ್ತದೆ. ಇದರಲ್ಲಿ ಸುಮಾರು 2,000 ಟನ್‌ ಹಸಿಕಸ ಇರುತ್ತದೆ. ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ 300ರಿಂದ 400 ಟನ್‌ ಹಸಿಕಸ ಸಂಗ್ರಹಗೊಂಡಿದೆ. ಒಣಕಸ ಹೆಚ್ಚುವರಿಯಾಗಿ 300 ಟನ್‌ ಉತ್ಪತ್ತಿಯಾಗಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಯುಧ ಪೂಜೆಗೆ ಹೋಲಿಸಿದರೆ ಈ ಹಬ್ಬದಲ್ಲಿ ಹೆಚ್ಚಿನ ಕಸ ಸಂಗ್ರಹ ಆಗುವುದಿಲ್ಲ. ಬೂದುಗುಂಬಳಕಾಯಿ, ಹೂವು, ಪೂಜಾ ಸಾಮಗ್ರಿ ಹಾಗೂ ಪಟಾಕಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬೂದುಗುಂಬಳಕಾಯಿ 15 ದಿನಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಆದರೆ, ಬಾಳೆ ದಿಂಡು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ’ ಎಂದರು.

‘ಪಟಾಕಿಗೆ ಬಳಸುವ ಕೆಲ ವಸ್ತುಗಳಿಗೆ ಬೆಲೆ ಜಾಸ್ತಿ. ಚಿಂದಿ ಆಯುವವರು ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಉಳಿದ ತ್ಯಾಜ್ಯವನ್ನು ಪೌರಕಾರ್ಮಿಕರು ತೆರವುಗೊಳಿಸುತ್ತಾರೆ’ ಎಂದು ಹೇಳಿದರು.

‘ಬುಧವಾರ ನರಕ ಚತುರ್ಥಿ ಇತ್ತು. ಅಂದು ಹೆಚ್ಚಿನ ಪಟಾಕಿ ಹೊಡೆದಿಲ್ಲ. ಶುಕ್ರವಾರ ಬಲಿಪಾಡ್ಯಮಿ ಇದ್ದು, ಜನರು ಹೆಚ್ಚಿನ ಪಟಾಕಿ ಸಿಡಿಸುವ ಸಾಧ್ಯತೆ ಇದೆ. ಇದರಿಂದ ಮತ್ತಷ್ಟು ಕಸ ಸಂಗ್ರಹಗೊಳ್ಳಲಿದೆ’ ಎಂದು ಅವರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry