ವಿಶೇಷ ವಿಮಾನದಲ್ಲಿ ಹೃದಯ ರವಾನೆ

ಸೋಮವಾರ, ಮೇ 20, 2019
32 °C

ವಿಶೇಷ ವಿಮಾನದಲ್ಲಿ ಹೃದಯ ರವಾನೆ

Published:
Updated:

ಮೈಸೂರು: ನಗರದ ಬಿಜಿಎಸ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಹೃದಯ ಹಾಗೂ ಶ್ವಾಸಕೋಶವನ್ನು ಗುರುವಾರ ವಿಶೇಷ ವಿಮಾನದಲ್ಲಿ ಚೆನ್ನೈಗೆ ರವಾನಿಸಿ, ಅಲ್ಲಿನ ಇಬ್ಬರು ರೋಗಿಗಳಿಗೆ ಜೋಡಿಸಲಾಗಿದೆ.

ನಸುಕಿನ 5.25ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನವು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆಸ್ಪತ್ರೆಯ ನಾಲ್ವರು ವೈದ್ಯರ ತಂಡವು ಶ್ವಾಸಕೋಶ ಹಾಗೂ ಹೃದಯದೊಂದಿಗೆ ಸಿದ್ಧವಾಗಿತ್ತು.

ವಿಮಾನ ಹತ್ತಿದ 20 ನಿಮಿಷದಲ್ಲೇ ಚೆನ್ನೈಗೆ ತಲುಪಿದ ವೈದ್ಯರ ತಂಡವು, ಅಲ್ಲಿನ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನೂರ್ ಅಹಮ್ಮದ್ ಹಾಗೂ ಮುಖೇಶಕುಮಾರ್ ಪಾಟೀಲ ಎಂಬುವವರಿಗೆ ಅಂಗಾಂಗಗಳನ್ನು ಜೋಡಿಸಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry