ಪ್ರತ್ಯೇಕ ಅಪಘಾತ ಒಟ್ಟು 8 ಸಾವು

ಮಂಗಳವಾರ, ಜೂನ್ 25, 2019
26 °C

ಪ್ರತ್ಯೇಕ ಅಪಘಾತ ಒಟ್ಟು 8 ಸಾವು

Published:
Updated:

ರಾಮನಗರ: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಎಂಟು ಜನ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸಾಹುಕಾರನ ಪಾಳ್ಯದ ಬಳಿ ಗುರುವಾರ ಹೆದ್ದಾರಿ ಪಕ್ಕದ ಬಸ್‌ ತಂಗುದಾಣದಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಬೆಂಗಳೂರಿನ ಐವರು ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಡೇಮಾಯಸಂದ್ರ ಬಳಿಯ ಮುತ್ತುಗನಹಳ್ಳಿ ಗ್ರಾಮದವರಾದ ಕೆಂಪರಾಜು (40), ಅವರ ಮಕ್ಕಳಾದ ಸುಮಾ (7) ಹಾಗೂ ಸಂಜಯ್ (02), ಬೆಂಗಳೂರು ಎಚ್‌ಕೆವಿಕೆ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಾದ ನವನೀತ್‌ ಉಪಾಧ್ಯಾಯ (22) ಹಾಗೂ ಸಾಜನ್‌ಕುಮಾರ್ (22) ಮೃತರು.

ಕಾರು ಕೆರೆಗೆ: ತಾಲ್ಲೂಕಿನಮನಗಾನಹಳ್ಳಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು ಕನಕಪುರ ತಾಲ್ಲೂಕಿನ ಗೊಟ್ಟಿಗೆಹಳ್ಳಿ ಗ್ರಾಮದ ಚಿದಾನಂದ (24), ಅವರ ಅಕ್ಕನ ಮಕ್ಕಳಾದ ಶಶಾಂಕ್‌ (6), ಇಂಪನಾ (4) ಮೃತಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry