ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲಬಾರಿಗೆ ‘ಪ್ಲೇಬಾಯ್‘ ಮಾಸಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳಲಿರುವ ಲಿಂಗ ಪರಿವರ್ತಿತೆ

Last Updated 20 ಅಕ್ಟೋಬರ್ 2017, 12:08 IST
ಅಕ್ಷರ ಗಾತ್ರ

ಲಾಸ್ ಏಂಜಲಿಸ್: ಜಗತ್ತಿನ ಪ್ರಖ್ಯಾತ ಮಾಸಪತ್ರಿಕೆ ‘ಪ್ಲೇಬಾಯ್‌’ನ 64 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಿಂಗ ಪರಿವರ್ತಿತೆಯೊಬ್ಬಳು ಮುಖಪುಟದ ಮಹಿಳಾ ರೂಪದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಹೀಗೆ ಆಯ್ಕೆಯಾದವರು ಪ್ರೆಂಚ್ ರೂಪದರ್ಶಿ ಐನೆಸ್ ರೋ. ಈ ಹಿಂದೆ ಇದೆ ಮಾಸಪತ್ರಿಕೆಯ 2014 ಮೇ ತಿಂಗಳಲ್ಲಿ ಪ್ರಕಟಗೊಂಡ ಅವತರಣಿಕೆಯಲ್ಲಿ ಬೆತ್ತಲಾಗಿ ಕಾಣಿಸಿಕೊಳ್ಳುವ ಮೂಲಕ ರೋ ಸುದ್ದಿಯಾಗಿದ್ದರು. 

ಮುಂಬರುವ ನವೆಂಬರ್, ಡಿಸೆಂಬರ್‌ನಲ್ಲಿ ಪ್ರಕಟವಾಗಲಿರುವ ಮಾಸಪತ್ರಿಕೆಯ ಮುಖಪುಟದಲ್ಲಿ ರೋ ಕಾಣಿಸಿಕೊಳ್ಳಲಿದ್ದಾರೆ. ಈ ಆಯ್ಕೆಯನ್ನು ಪ್ಲೇಬಾಯ್ ಮಾಸಪತ್ರಿಕೆಯ ಸಂಸ್ಥಾಪಕರಾದ ಹ್ಯೂಗ್ ಹೆಫ್ನರ್ ಖುದ್ದಾಗಿ ತಾವು ಸಾಯುವ ಮುಂಚೆಯೇ ನಿರ್ಧರಿಸಿದ್ದರು‌ ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿರುವ 26 ವರ್ಷದ ರೋ ‘ನನ್ನ ಆರಂಭಿಕ ದಿನಗಳಲ್ಲಿ ಸಮಾಜ ಲಿಂಗಪರಿವರ್ತನೆಗೊಂಡಿರುವುದನ್ನು ಸುಲಭವಾಗಿ ಒಪ್ಪಕೊಂಡಿರಲಿಲ್ಲ. ಆದರೆ ‘ಪ್ಲೇಬಾಯ್‌’ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿರುವುದು ನನಗೆ ಸಂತಸದ ವಿಷಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT