ಸ್ಕ್ವಾಷ್: ಘೋಷಾಲ್‌ಗೆ ಸೋಲು

ಗುರುವಾರ , ಜೂನ್ 20, 2019
27 °C

ಸ್ಕ್ವಾಷ್: ಘೋಷಾಲ್‌ಗೆ ಸೋಲು

Published:
Updated:

ಸುರೆ: ಭಾರತದ ಅಗ್ರಗಣ್ಯ ಆಟಗಾರ ಸೌರವ್ ಘೋಷಾಲ್‌ ಇಲ್ಲಿ ನಡೆದ ಪಿಎಎಸ್‌ಎ ಚಾನೆಲ್‌ ವಿಎಎಸ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಸೋಲು ಕಂಡಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ 11–13, 8–11, 9–11ರಲ್ಲಿ ಅಗ್ರಗಣ್ಯ ಆಟಗಾರ ಈಜಿಪ್ಟ್‌ನ ಮೊಹಮ್ಮದ್ ಎಲ್‌ಶೊರ್‌ಬರ್ಗಿ ಎದುರು ಪರಾಭವಗೊಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದ ಎಲ್‌ಶೊರ್‌ಬರ್ಗಿ ಎದುರು ಘೋಷಾಲ್ ಪಾಯಿಂಟ್ಸ್‌ ಕಲೆಹಾಕಲು ಪ್ರಯಾಸ ಪಟ್ಟರು.

ಮೊದಲ ಗೇಮ್‌ನಲ್ಲಿ ಪೈಪೋಟಿ ನೀಡಿದ ಭಾರತದ ಆಟಗಾರ ಬಳಿಕ ಮಂಕಾದರು. ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ದೀಪಿಕಾ ಪಳ್ಳಿಕಲ್ ಹಾಗೂ ಜೋಷ್ನಾ ಚಿಣ್ಣಪ್ಪ ಮೊದಲ ಸುತ್ತಿನಲ್ಲಿಯೇ ಸೋತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry