ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಹೂಳು ತೆಗೆಯಲು ಒತ್ತಾಯ

Last Updated 23 ಅಕ್ಟೋಬರ್ 2017, 6:38 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮೀಪದ ರಾಮಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಬಸಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಯಲ್ಲಿ ಹೂಳು ತುಂಬಿದೆ. ಈ ವರ್ಷ ಭಾರಿ ಮಳೆ ಆಗಿದ್ದರೂ ಕೆರೆ ಭರ್ತಿಯಾಗಿಲ್ಲ. ಕೆರೆಗೆ ನೀರು ಬರುವುದನ್ನು ಗ್ರಾಮಸ್ಥರೇ ತಡೆದಿದ್ದಾರೆ. ಸದ್ಯ ನೀರಿಲ್ಲದೆ ಕೆರೆ ಒಣಗಿದೆ.

‘ಅಂದಾಜು 8 ಎಕರೆ ಪ್ರದೇಶದಲ್ಲಿರುವ ಕೆರೆಯ ನೀರನ್ನೇ ಗ್ರಾಮಸ್ಥರು ನೆಚ್ಚಿಕೊಂಡಿದ್ದರು.ಆದರೆ, ಹೂಳು ತುಂಬಿರುವುದರಿಂದ ಕಡಿಮೆ ಪ್ರಮಾಣದಲ್ಲಿ ನೀರು
ಸಂಗ್ರಹ ಆಗುತ್ತದೆ. ಹೂಳನ್ನು ತೆಗೆಸಿದರೆ, ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಕಳೆದ ಎರಡು ದಶಕಗಳ ಹಿಂದೆ ಹೂಳು ತೆಗೆಸಲಾಗಿತ್ತು. ಹೂಳು ತೆಗೆಸಲು ಅನುದಾನ ನೀಡಬೇಕು ಎಂದು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವಣ್ಣೆಪ್ಪ ದೊಡ್ಡಮನಿ ಹೇಳಿದರು.

‘ಶಾಸಕರು ಆದಷ್ಟು ಬೇಗ ಅನುದಾನ ಕೊಟ್ಟರೆ ನಮ್ಮೂರಿನ ಕೆರೆ ಹೂಳನ್ನು ತೆಗೆಸಲು ಸಾಧ್ಯವಾಗುತ್ತದೆ’ ಎಂದು ಹೇಳುತ್ತಾರೆ ಗ್ರಾಮಸ್ಥ ಈರಯ್ಯ ತಾಮ್ರಗುಂಡಿಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT