ಪಾಕಿಸ್ತಾನಕ್ಕೆ ಭರ್ಜರಿ ಜಯ

ಸೋಮವಾರ, ಮೇ 20, 2019
32 °C

ಪಾಕಿಸ್ತಾನಕ್ಕೆ ಭರ್ಜರಿ ಜಯ

Published:
Updated:

ಶಾರ್ಜಾ: ನಾಲ್ಕು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಪಾಕಿಸ್ತಾನ ತಂಡದವರು ಶ್ರೀಲಂಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲೂ ಭಾರಿ ಜಯ ಸಾಧಿಸಿದರು. ಇಲ್ಲಿನ ಶಾರ್ಜಾ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಒಂಬತ್ತು ವಿಕೆಟ್‌ಗಳಿಂದ ಎದುರಾಳಿಗಳನ್ನು ಮಣಿಸಿತು.

ಶ್ರೀಲಂಕಾವನ್ನು 103 ರನ್‌ಗಳಿಗೆ ಕೆಡವಿದ ಪಾಕಿಸ್ತಾನ 20.2 ಓವರ್‌ಗಳಲ್ಲಿ ಗುರಿ ತಲುಪಿತು.ಇಮಾಮ್ ಉಲ್‌ ಹಕ್ 45 ಮತ್ತು ಫಖರ್ ಜಮಾನ್‌ 48 ರನ್‌ ಗಳಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಎಡಗೈ ವೇಗಿ ಉಸ್ಮಾನ್ ಖಾನ್‌ (34ಕ್ಕೆ5) ಅವರ ದಾಳಿಗೆ ನಲುಗಿತು. ತಲಾ ಎರಡು ವಿಕೆಟ್ ಕಬಳಿಸಿದ ಹಸನ್ ಅಲಿ ಮತ್ತು ಶಾಬಾದ್ ಖಾನ್‌ ಅವರು ಉಸ್ಮಾನ್‌ ಖಾನ್‌ಗೆ ಉತ್ತಮ ಬೆಂಬಲ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 26.2 ಓವರ್‌ಗಳಲ್ಲಿ 103 (ತಿಸ್ಸಾರ ಪೆರೇರ 25; ಉಸ್ಮಾನ್ ಖಾನ್‌ 34ಕ್ಕೆ5); ಪಾಕಿಸ್ತಾನ:20.2 ಓವರ್‌ಗಳಲ್ಲಿ 1ಕ್ಕೆ105 (ಇಮಾಮ್ ಉಲ್‌ ಹಕ್ 45, ಫಖರ್ ಜಮಾನ್‌ 48). ಫಲಿತಾಂಶ: ಪಾಕಿಸ್ತಾನಕ್ಕೆ 9 ವಿಕೆಟ್ ಜಯ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry