ಗಲ್ಲು ಶಿಕ್ಷೆ ವೇಳೆ ವೈದ್ಯರ ಹಾಜರಿ ರದ್ದುಗೊಳಿಸಲು ಆಗ್ರಹ

ಮಂಗಳವಾರ, ಜೂನ್ 18, 2019
31 °C

ಗಲ್ಲು ಶಿಕ್ಷೆ ವೇಳೆ ವೈದ್ಯರ ಹಾಜರಿ ರದ್ದುಗೊಳಿಸಲು ಆಗ್ರಹ

Published:
Updated:

ನವದೆಹಲಿ: ಅಪರಾಧಿಗಳನ್ನು ಗಲ್ಲಿಗೆ ಏರಿಸುವ ಸಮಯದಲ್ಲಿ ವೈದ್ಯರು ಹಾಜರಿರಬೇಕೆಂಬ ನಿಯಮವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ, ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಪತ್ರ ಬರೆದಿದೆ.

‘ಈ ನಿಯಮವು ಜೀವ ಉಳಿಸುವ ವೈದ್ಯಕೀಯ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಇದು ನಮ್ಮ ವೃತ್ತಿಗೆ ತರವಲ್ಲ’ ಎಂದು ಪತ್ರ ಬರೆದಿರುವ ಐಎಂಎ ಮುಖ್ಯಸ್ಥ ಕೆ.ಕೆ.ಅಗರ್‌ವಾಲ್‌ ಹೇಳಿದ್ದಾರೆ.

ಗಲ್ಲಿಗೇರಿಸಿದ ಕೈದಿಯ ಸಾವನ್ನು ದೃಢಪಡಿಸಲು ವೈದ್ಯರು ಗಲ್ಲು ಶಿಕ್ಷೆ ಸಮಯದಲ್ಲಿ ಹಾಜರಿರಬೇಕೆಂಬ ನಿಯಮವಿದೆ.

ವಿಶ್ವ ವೈದ್ಯಕೀಯ ಸಂಘವು (ಡಬ್ಲ್ಯುಎಂಎ) ತಿದ್ದುಪಡಿ ಮೂಲಕ ಸಿದ್ಧಪಡಿಸಿದ ‘ಮರಣದಂಡನೆ ವೇಳೆ ವೈದ್ಯರ ಉಪಸ್ಥಿತಿ’ಗೆ ಸಂಬಂಧಪಟ್ಟ ಕರಡಿನಲ್ಲಿ, ಸರ್ಕಾರಗಳು ವಿಧಿಸುವ ಗಲ್ಲು ಶಿಕ್ಷೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ತನ್ನ ಸದಸ್ಯ ವೈದ್ಯಕೀಯ ಸಂಘಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಇದರ ಜೊತೆಗೆ, ಮರಣದಂಡನೆ ಶಿಕ್ಷೆ ವಿಧಿಸಲು ಯಾವುದೇ ರೀತಿಯ ಔಷಧ ಸಾಮಗ್ರಿಗಳನ್ನು ವೈದ್ಯರು ಆಮದು ಮಾಡಿಕೊಳ್ಳುವಂತಿಲ್ಲ ಹಾಗೂ ಇತರರಿಗೆ ಸೂಚಿಸುವಂತಿಲ್ಲ ಎಂಬ ಅಂಶವನ್ನೂ ಕರಡಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ವಿಶ್ವ ವೈದ್ಯಕೀಯ ಸಂಘ ರೂಪಿಸಿರುವ ಎಲ್ಲ ನಿಯಮಗಳನ್ನು ಅದರ ಸದಸ್ಯತ್ವ ಪಡೆದಿರುವ ವೈದ್ಯಕೀಯ ಸಂಘಗಳು ಒಪ್ಪಿಕೊಂಡಿವೆ. ಭಾರತೀಯ ವೈದ್ಯಕೀಯ ಸಂಘವೂ ಇವುಗಳಲ್ಲಿ ಒಂದು. ಆದ್ದರಿಂದ, ‘ಮರಣದಂಡನೆ ವೇಳೆ ವೈದ್ಯರ ಉಪಸ್ಥಿತಿ’ಗೆ ಸಂಬಂಧಿಸಿದ ಕರಡನ್ನು ಭಾರತದಲ್ಲಿ ಜಾರಿಗೊಳಿಸಬೇಕು’ ಎಂದೂ ಅವರು ಹೇಳಿದ್ದಾರೆ.

ಮದ್ಯಪ್ರದೇಶ: ಉತ್ಪನ್ನಗಳ ‘ಮಾದರಿ ಬೆಲೆ’ ರೈತರ ಖಾತೆಗೆ

ಭೋಪಾಲ (ಪಿಟಿಐ): ರೈತರ ಉತ್ಪನ್ನಗಳ ‘ಮಾದರಿ ದರ’ವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಮಧ್ಯಪ್ರದೇಶ ಸರ್ಕಾರದ ‘ಭವಂತರ್ ಯೋಜನಾ’ದ ಪ್ರಯೋಜನವನ್ನು 16 ಲಕ್ಷಕ್ಕೂ ಅಧಿಕ ರೈತರು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ಪನ್ನಗಳ ಮಾರುಕಟ್ಟೆ ದರ ಹಾಗೂ ಕನಿಷ್ಠ ಬೆಂಬಲ ಬೆಲೆಯ ನಡುವಿನ ಅಂತರವನ್ನು ‘ಮಾದರಿ ಬೆಲೆ’ ಎಂದು ಕರೆಯಲಾಗಿದೆ. ಈ ವ್ಯತ್ಯಾಸದ ಮೌಲ್ಯವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ದೇಶದಲ್ಲೇ ಮೊದಲ ಬಾರಿ ಜಾರಿಗೆ ತರಲಾದ ಈ ಯೋಜನೆ ಅಡಿ 16 ಲಕ್ಷಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ.

‘ನೆರೆಯ ಎರಡು ರಾಜ್ಯಗಳನ್ನು ಒಳಗೊಂಡು ಒಟ್ಟು ಮೂರು ರಾಜ್ಯಗಳಲ್ಲಿ ಒಂದು ಉತ್ಪನ್ನಕ್ಕೆ ಸಿಗುತ್ತಿರುವ ಬೆಲೆಯನ್ನು ಆಧರಿಸಿ ಮಾದರಿ ಬೆಲೆಯನ್ನು ನಿರ್ಧರಿಸಲಾಗುತ್ತದೆ’ ಎಂದು ರೈತ ಕಲ್ಯಾಣ ಮತ್ತು ಕೃಷಿ ಅಭಿವೃದ್ಧಿ ನಿಗಮದ ಪ್ರಧಾನ ಕಾರ್ಯದರ್ಶಿ ರಾಜೇಶ್ ರಜೋರಾ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry