ಶೆರಿನ್‌ ಸಾವಿನಲ್ಲಿ ಪಾತ್ರವಿಲ್ಲ: ಮಲತಾಯಿ ಸಿನಿ

ಬುಧವಾರ, ಜೂನ್ 19, 2019
28 °C

ಶೆರಿನ್‌ ಸಾವಿನಲ್ಲಿ ಪಾತ್ರವಿಲ್ಲ: ಮಲತಾಯಿ ಸಿನಿ

Published:
Updated:

ಹ್ಯೂಸ್ಟನ್‌: ಭಾರತ ಮೂಲದ ಬಾಲಕಿ ಶೆರಿನ್‌ ಮ್ಯಾಥ್ಯೂಸ್‌ ಸಾವಿನಪ್ಪಿರುವ ಪ್ರಕರಣದಲ್ಲಿ ತಮ್ಮ ಪಾತ್ರವಿರುವ ಕುರಿತ ಆರೋಪವನ್ನು ಸಾಕುತಾಯಿ ಸಿನಿ ಮ್ಯಾಥ್ಯೂಸ್‌ ನಿರಾಕರಿಸಿದ್ದಾರೆ.

ಈ ಕುರಿತು ಸಿನಿ ಮ್ಯಾಥ್ಯೂಸ್‌ ಅವರ ವಕೀಲರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಸಾಕುಮಗಳು ಶೆರಿನ್‌ ಕಾಣೆಯಾದ ದಿನದಿಂದಲೂ ಸಿನಿ ಅವರು ಪೊಲೀಸರು ನಡೆಸುತ್ತಿರುವ ತನಿಖೆಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಕುತಂದೆ ವೆಸ್ಲೆ ಮ್ಯಾಥ್ಯೂಸ್‌ ಪೊಲೀಸರಿಗೆ ಶರಣಾಗಿದ್ದು, ಶಿರಿನ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಕಾರಣ ಸಿನಿ ಮ್ಯಾಥ್ಯೂಸ್‌ ಅವರ ವಿಚಾರಣೆ ನಡೆಸುವ ಅಗತ್ಯವಿಲ್ಲ. ಬಾಲಕಿ ಸಾವಿಗೆ ಸಿನಿ ಅವರು ಯಾವುದೇ ರೀತಿಯಲ್ಲಿ ಕಾರಣರಲ್ಲ ಎಂದು ಹೇಳಿದ್ದಾರೆ.

ಶೆರಿನ್‌ ಕಾಣೆಯಾದ ಸಂದರ್ಭದಲ್ಲಿ ಪತ್ನಿ ನಿದ್ದೆ ಮಾಡುತ್ತಿದ್ದರು ಎಂದು ವೆಸ್ಲೆ ಮ್ಯಾಥ್ಯೂಸ್‌ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್‌ ಮೂಲಗಳು ತಿಳಿಸಿವೆ.

ಶೆರಿನ್‌ ನಾಪತ್ತೆ ಕುರಿತು ನೀಡಿದ್ದ ಹೇಳಿಕೆಯನ್ನು ವೆಸ್ಲೆ ಮಂಗಳವಾರ ಬದಲಿಸಿದ್ದರು. ಆದಕಾರಣ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry