ಮ್ಯಾನ್ಮಾರ್‌ ಕಾನ್ಸಲ್‌ ಜನರಲ್‌ ಅಪಘಾತಕ್ಕೆ ಬಲಿ

ಮಂಗಳವಾರ, ಜೂನ್ 25, 2019
26 °C

ಮ್ಯಾನ್ಮಾರ್‌ ಕಾನ್ಸಲ್‌ ಜನರಲ್‌ ಅಪಘಾತಕ್ಕೆ ಬಲಿ

Published:
Updated:
ಮ್ಯಾನ್ಮಾರ್‌ ಕಾನ್ಸಲ್‌ ಜನರಲ್‌ ಅಪಘಾತಕ್ಕೆ ಬಲಿ

ಗಿರಿದಿಹ್‌ (ಜಾರ್ಖಂಡ್‌): ಕೋಲ್ಕತ್ತದಲ್ಲಿದ್ದ ಮ್ಯಾನ್ಮಾರ್‌ನ ಕಾನ್ಸಲ್‌ ಜನರಲ್‌ ‍ಪ್ವಿ ಸೊ (49) ಅವರು ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಅವರ ಪತ್ನಿ ಸೇರಿದಂತೆ ಮೂವರಿಗೆ ಗಾಯಗಳಾಗಿವೆ.

ಸೊ ಅವರಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಆಗ ಸೊ ಸ್ಥಳದಲ್ಲೇ ಮೃತಪಟ್ಟರು ಎಂದು ಎಸ್ಪಿ ಅಖಿಲೇಶ್‌ ಬೆರಿಯಾರ್‌ ತಿಳಿಸಿದ್ದಾರೆ.

ಸೊ ಅವರ ಪತ್ನಿ ನವೊ, ಸಲಹೆಗಾರ ಟಿನ್‌ಗುಂಗ್‌ ಮತ್ತು ಚಾಲಕ ವಿಪಿನ್‌ ಸಿಂಗ್‌ ಅವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯ ಚಾಲಕ ಮತ್ತು ಸಹಾಯಕನನ್ನು ಬಂಧಿಸಲಾಗಿದೆ.

ಸೊ ಅವರ ನಿಧನಕ್ಕೆ ಜಾರ್ಖಂಡ್‌ ಮುಖ್ಯಮಂತ್ರಿ ರಘುವರ ದಾಸ್‌ ಸಂತಾಪ ಸೂಚಿಸಿದ್ದಾರೆ. ಸೊ ಅವರು ಕಳೆದ ಡಿಸೆಂಬರ್‌ 6ರಂದು ಕೋಲ್ಕತ್ತದ ಕಾನ್ಸುಲ್‌ ಜನರಲ್‌ ಆಗಿ ನೇಮಕಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry