ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ ಮುನ್ಸೂಚನೆಗೆ ಕೃತಕ ಬುದ್ಧಿಮತ್ತೆ

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಂಡನ್: ಸಂಭವನೀಯ ಭೂಕಂಪದ ಮುನ್ಸೂಚನೆ ನೀಡುವ ಸಾಮರ್ಥ್ಯ ಹೊಂದಿರುವ ಕೃತಕ ಬುದ್ಧಿ ಮತ್ತೆ ವ್ಯವಸ್ಥೆಯನ್ನು ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಪ್ರಾಕೃತಿಕ ವಿಪತ್ತುಗಳನ್ನು ಎದುರಿಸುವಲ್ಲಿ ಸಿದ್ಧರಾಗಲು ಹಾಗೂ ಸಾಕಷ್ಟು ಜೀವಗಳನ್ನು ಉಳಿಸಲು ಈ ಕೃತಕ ಬುದ್ಧಿಮತ್ತೆ ವ್ಯವಸ್ಥೆ ನೆರವಾಗುವ ಸಾಧ್ಯತೆ ಇದೆ.

ಭೂಕಂಪ ಸಂಭವಿಸುವ ಮೊದಲಿನ ಪ್ರಕ್ರಿಯೆಯಗಳ ಕುರಿತು ಕೇಂಬ್ರಿಜ್ ಹಾಗೂ ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ನೈಜ ಭೂಕಂಪದಮಾದರಿಯಲ್ಲಿಯೇ ಪ್ರಯೋಗಾಲಯದಲ್ಲಿ ಪರಿಸ್ಥಿತಿ ಸೃಷ್ಟಿಸಲಾಗಿತ್ತು. ಈ ಕಂಪನದಿಂದ ಉಂಟಾದ ಧ್ವನಿ ತರಂಗಗಳ ಸಂಕೇತಗಳನ್ನು ಉಪಕರಣಗಳಿಂದ ವಿಶ್ಲೇಷಣೆ ನಡೆಸಲಾಗಿತ್ತು.

ಭೂಕಂಪ ಸಂಭವಿಸುವ ಮೊದಲಿಗೆ ನಿರ್ದಿಷ್ಟ ಮಾದರಿಯ ಧ್ವನಿತರಂಗಗಳು ಸೃಷ್ಟಿಯಾಗುತ್ತವೆ ಎನ್ನುವುದು ಈ ಪ್ರಯೋಗದಲ್ಲಿ ತಿಳಿದುಬಂದಿತು. ಈ ಧ್ವನಿತರಂಗಗಳ ಮಾದರಿಯಿಂದ ಭೂಕಂಪಕ್ಕೆ ಮೊದಲು ಎಷ್ಟು ಒತ್ತಡ ಸೃಷ್ಟಿಯಾಗುತ್ತದೆ ಎಂದು ನಿಖರವಾಗಿ ತಿಳಿಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.

‘ಭೂಕಂಪ ಸಂಭವಿಸುವುದನ್ನು ಸಾಕಷ್ಟು ಮೊದಲೇ ಅರಿಯಲು, ಉಪಕರಣಗಳನ್ನು ಬಳಸಿಕೊಂಡು ಧ್ವನಿತರಂಗಗಳ ಸಂಕೇತಗಳನ್ನು ವಿಶ್ಲೇಷಿಸಿರುವುದು ಇದೇ ಮೊದಲು. ಇದರಿಂದ ಸಾಕಷ್ಟು ಮೊದಲೇ ಭೂಕಂಪದ ಎಚ್ಚರಿಕೆ ನೀಡ ಬಹುದು’ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಕಾಲಿನ್ ಹಂಫ್ರಿಸ್ ಹೇಳಿದ್ದಾರೆ. ಜಿಯೊಫಿಸಿಕಲ್ ರಿವ್ಯು ಲೆಟರ್ಸ್ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯು ಪ್ರಕಟ ಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT