ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಯೋಧರ ಧರಣಿ ಟೆಂಟ್‌ ನೆಲಸಮ

Last Updated 30 ಅಕ್ಟೋಬರ್ 2017, 19:39 IST
ಅಕ್ಷರ ಗಾತ್ರ

ನವದೆಹಲಿ: ‘ಒಂದು ಶ್ರೇಣಿ, ಒಂದು ಪಿಂಚಣಿ’ ಜಾರಿಗೆ ಒತ್ತಾಯಿಸಿ ಎರಡು ವರ್ಷಗಳಿಂದ ಮಾಜಿ ಯೋಧರು ಜಂತರ್‌ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ಡೇರೆಗಳನ್ನು ಸೋಮವಾರ ತೆರವುಗೊಳಿಸಲಾಗಿದೆ.

ಐತಿಹಾಸಿಕ ಜಂತರ್‌ ಮಂತರ್‌ ಸುತ್ತಮುತ್ತ ಪ್ರತಿಭಟನೆ, ಧರಣಿಗಳನ್ನು ನಿಷೇಧಿಸುವಂತೆ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅ.5ರಂದು ಆದೇಶ ಹೊರಡಿಸಿತ್ತು.

ಪೊಲೀಸರ ನೆರವಿನಿಂದ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಬೃಹತ್‌ ಯಂತ್ರಗಳನ್ನು ಬಳಸಿ ಡೇರೆಗಳನ್ನು ನೆಲಸಮಗೊಳಿಸಿದೆ. ‘ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ಮತ್ತು ನಮ್ಮ ಧ್ವನಿಯನ್ನು ಹತ್ತಿಕ್ಕುವ ಕ್ರಮ ಇದು’ ಎಂದು ಧರಣಿನಿರತ ಮಾಜಿ ಯೋಧರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT