7

ನಿಮ್ಮ ಮಕ್ಕಳು ನೆಮ್ಮದಿಯಾಗಿ ನಿದ್ರಿಸಬೇಕಾದರೆ ವಿದ್ಯುನ್ಮಾನ ಸಾಧನಗಳನ್ನು ದೂರವಿರಿಸಿ

Published:
Updated:
ನಿಮ್ಮ ಮಕ್ಕಳು ನೆಮ್ಮದಿಯಾಗಿ ನಿದ್ರಿಸಬೇಕಾದರೆ ವಿದ್ಯುನ್ಮಾನ ಸಾಧನಗಳನ್ನು ದೂರವಿರಿಸಿ

ವಾಷಿಂಗ್ಟನ್‌: ನಿಮ್ಮ ಮಕ್ಕಳು ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎನಿಸಿದರೆ ಅಥವಾ ಸರಿಯಾಗಿ ನಿದ್ರಿಸಬೇಕು ಎಂಬ ಕಾಳಜಿ ಇದ್ದರೆ, ಅವರು ಮಲಗುವ ಕೋಣೆಯಿಂದ ವಿದ್ಯುನ್ಮಾನ ಸಾಧನಗಳನ್ನು ದೂರವಿರಿಸಿ ಎಂದು ಸಂಶೋಧನಾ ವರದಿಯೊಂದು ಸಲಹೆ ನೀಡಿದೆ.

ನಿದ್ರಿಸಬೇಕಾದ ಸಮಯದಲ್ಲಿ ವಿದ್ಯುನ್ಮಾನ ಸಾಧನಗಳನ್ನು ಬಳಸುವುದರಿಂದ ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ವಿದ್ಯುನ್ಮಾನ ಸಾಧನಗಳಿಂದ ದೂರವಿರುವುದರಿಂದ ನಿದ್ರೆಯ ಸಮಯವನ್ನು ಶಾಂತಿಯುತವಾಗಿ ಕಳೆಯಲು ಸಾಧ್ಯವಾಗುತ್ತದೆ ಎಂದು ಪೆನ್ನ್‌ ಸ್ಟೇಟ್‌ ಸಂಶೋಧಕರು ವರದಿ ಮಾಡಿದ್ದಾರೆ.

ನಿದ್ರೆಯು ಮಾನಸಿಕ ಸ್ವಾಸ್ಥ್ಯಕ್ಕೆ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯ ಪಟ್ಟಿರುವ ಸಂಶೋಧಕರು, ವಿದ್ಯುನ್ಮಾನ ಸಾಧನಗಳ ಬೆಳಕು ನಿದ್ರೆಯ ಮೇಲಷ್ಟೇ ಅಲ್ಲದೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಅಗತ್ಯ ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವರದಿಯಲ್ಲಿ ನಿದ್ರೆಯ ಸಮಯವನ್ನು ಉತ್ತಮವಾಗಿ ಕಳೆಯಲು ಸಹಕಾರಿಯಾಗುವ ಐದು ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ.

1. ಆರೋಗ್ಯಕರ ನಿದ್ರೆಯ ಮಹತ್ವದ ಬಗ್ಗೆ ಚರ್ಚಿಸುವ ಮೂಲಕ ಕುಟುಂಬ ಸದಸ್ಯರು ನಿದ್ರೆಗೆ ಆದ್ಯತೆ ನೀಡುವಂತೆ ಮಾಡಿ.

2. ಮಲಗುವ ಸಮಯದಲ್ಲಿ ವಿದ್ಯುನ್ಮಾನ ಸಾಧನಗಳನ್ನು ನಿಯಂತ್ರಿಸಿ, ಮನಸ್ಸಿಗೆ ಮುದ ನೀಡುವ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

3. ಮಕ್ಕಳು ಮಲಗುವ ಕೋಣೆಯಿಂದ ಟಿವಿ ಸೇರಿದಂತೆ, ವಿಡಿಯೋ ಗೇಮ್‌ಗಳು, ಕಂಪ್ಯೂಟರ್‌, ಟ್ಯಾಬ್ಲೆಟ್‌ ಹಾಗೂ ಮೊಬೈಲ್‌ಗಳನ್ನು ದೂರವಿರಿಸಿ.

4. ವಿದ್ಯುನ್ಮಾನ ಸಾಧನಗಳಿಂದ ಹೊಮ್ಮುವ ಪ್ರಕಾಶಮಾನವಾದ ಬೆಳಕಿನಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿ.

5. ಮಕ್ಕಳು ಅಥವಾ ಯುವಕರು ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಅವರ ವರ್ತನೆಯಲ್ಲಿ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂದರೆ ಅದಕ್ಕೆ ನಿದ್ರೆ ಸಮಸ್ಯೆಯೂ ಕಾರಣವಾಗಿರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry