ಶನಿವಾರ, ಮಾರ್ಚ್ 6, 2021
29 °C
ಆರ್‌ಟಿಐ ಅಡಿ ಬಹಿರಂಗ

‘ಕಮಲ’ ರಾಷ್ಟ್ರೀಯ ಹೂವು ಅಲ್ಲ!

ಪಿಟಿಐ Updated:

ಅಕ್ಷರ ಗಾತ್ರ : | |

‘ಕಮಲ’ ರಾಷ್ಟ್ರೀಯ ಹೂವು ಅಲ್ಲ!

ಲಖನೌ: ಭಾರತದ ರಾಷ್ಟ್ರೀಯ ಹೂವು ಯಾವುದು ಎಂಬ ಪ್ರಶ್ನೆಗೆ ಎಲ್ಲರಿಂದಲೂ ಬರುವ ಉತ್ತರ ಒಂದೆ... ‘ಕಮಲ’.

ಜನಗಣಮನ... ರಾಷ್ಟ್ರಗೀತೆ, ಹುಲಿ ರಾಷ್ಟ್ರೀಯ ಪ್ರಾಣಿ, ನವಿಲು ರಾಷ್ಟ್ರೀಯ ಪಕ್ಷಿ. ಅದೇ ರೀತಿ ಕಮಲ ಭಾರತದ ರಾಷ್ಟ್ರೀಯ ಪುಷ್ಪ ಎಂಬ ಗ್ರಹಿಕೆ ಇತ್ತು. ಆದರೆ, ಹೂವಿಗೆ ಸಂಬಂಧಿಸಿದಂತೆ ಇಲ್ಲಿಯವರೆಗಿನ ನಮ್ಮ ಗ್ರಹಿಕೆ ತಪ್ಪು ಎನ್ನುವ ಸಂಗತಿ ಈಗ ಬಯಲಾಗಿದೆ.

‘ಭಾರತ ಯಾವುದೇ ಹೂವನ್ನು ರಾಷ್ಟ್ರೀಯ ಹೂವು ಎಂದು ಘೋಷಿಸಿಲ್ಲ. ಎಲ್ಲರೂ ತಿಳಿದಂತೆ ಕಮಲ  ರಾಷ್ಟ್ರೀಯ ಹೂವು ಅಲ್ಲ’ ಎಂದು ಬಟಾನಿಕಲ್ ಸರ್ವೆ ಆಫ್ ಇಂಡಿಯಾ(ಬಿಎಸ್ಐ) ಮಾಹಿತಿ ನೀಡಿದೆ. ಬಿಎಸ್ಐ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯುನ್ನತ ಸಂಶೋಧನಾ ಸಂಸ್ಥೆಯಾಗಿದೆ.

ಮಾಹಿತಿ ಹಕ್ಕು ಕಾಯಿದೆ ಅಡಿ (ಆರ್‌ಟಿಐ) ಲಖನೌದ ಐಶ್ವರ್ಯಾ ಪರಾಶರ ಎಂಬ 11ನೇ ತರಗತಿ ವಿದ್ಯಾರ್ಥಿನಿ ಈ ಪ್ರಶ್ನೆ ಕೇಳಿದ್ದಳು.

‘ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ‘ಕಮಲ ಭಾರತದ ರಾಷ್ಟ್ರೀಯ ಹೂವು’ ಎಂಬ ಮಾಹಿತಿಯೇ ಇದೆ. ಕುತೂಹಲಕ್ಕಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ನಾನು ಈ ಪ್ರಶ್ನೆ ಕೇಳಿದ್ದೆ. ಸರ್ಕಾರ ಈಗಲಾದರೂ ತನ್ನ ವೆಬ್‌ಸೈಟ್‌ನಿಂದ ತಪ್ಪು ಮಾಹಿತಿ ತೆಗೆದು ಹಾಕಬೇಕು’ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.