ಸೋಮವಾರ, ಮಾರ್ಚ್ 8, 2021
31 °C

ಕಣ್ಮನ ಸೆಳೆಯಲಿದೆ ಫಲಪುಷ್ಪ ಪ್ರದರ್ಶನ!

ಪಿ.ಕೆ.ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಕಣ್ಮನ ಸೆಳೆಯಲಿದೆ ಫಲಪುಷ್ಪ ಪ್ರದರ್ಶನ!

ಕಾರವಾರ: ಕರಾವಳಿ ಉತ್ಸವದ ನಿಮಿತ್ತ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಡಿ. 8ರಿಂದ 10ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಇದಕ್ಕಾಗಿ ಕಡಲತೀರದ ಐಎನ್‌ಎಸ್‌ ಚಾಪೆಲ್‌ ಯುದ್ಧನೌಕೆ ಸಂಗ್ರಹಾಲಯದ ಆವರಣ ಸಜ್ಜುಗೊಳ್ಳುತ್ತಿದೆ.

ಕಳೆದ ಬಾರಿಯ ಉತ್ಸವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ನಡೆದಿತ್ತು. ಆದರೆ ಈ ಬಾರಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. ತರಹೇವಾರಿ ಹೂ ಗಿಡಗಳ ಪ್ರದರ್ಶನದ ಜತೆಗೆ ವಿವಿಧ ಆಕರ್ಷಕ ಹೂವುಗಳನ್ನು ಬೆಳೆಸಲಾಗುತ್ತಿದೆ. ಪುಣೆಯಿಂದ ವಿಶೇಷವಾಗಿ 5 ಸಾವಿರ ಗಿಡಗಳನ್ನು ತರಿಸಲಾಗಿದ್ದು, ಒಂದು ತಿಂಗಳ ಹಿಂದೆಯೇ ಅವುಗಳನ್ನು ಸಂಗ್ರಹಾಲಯದಲ್ಲಿ ನೆಡಲಾಗಿದೆ. ಇವುಗಳಲ್ಲಿ ಈಗಾಗಲೇ ಕೆಲವೊಂದು ಹೂ ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿವೆ.

ಹೂವಿನ ಜಿರಾಫೆ: ‘ಕೋಲ್ಕತ್ತದ ಸೇವಂತಿ ಹೂವುಗಳಿಂದ ಜಿರಾಫೆ ಹಾಗೂ ಕಾರ್ನೇಶನ್‌ ಹೂವುಗಳಿಂದ ಹಾರ್ನ್‌ಬಿಲ್‌ ಆಳೆತ್ತರದ ಕಲಾಕೃತಿಗಳನ್ನು ಈ ಬಾರಿ ಕಲಾವಿದ ತಂಡ ರಚಿಸಲಿದೆ.

ಹುಲ್ಲಿನಿಂದ ಆನೆ, ವೀಣೆ, ಹುಲಿ, ಜಿಂಕೆ ಹೀಗೆ ಹಲವು ಕಲಾಕೃತಿಗಳು ಮೈದಳೆಯಲಿವೆ. ಕಲ್ಲಂಗಡಿ ಹಣ್ಣಿನಲ್ಲಿ ರಾಷ್ಟ್ರ ನಾಯಕರು ಹಾಗೂ ಸಾಹಿತಿಗಳ ಕಲಾಕೃತಿ ಹಾಗೂ ತರಕಾರಿಯನ್ನು ಬಳಕೆ ಮಾಡಿಕೊಂಡು ಬೆಂಗಳೂರು ಹಾಗೂ ಹುಬ್ಬಳ್ಳಿ ಕಲಾವಿದರು ವಿವಿಧ ಕಲಾಕೃತಿಗಳನ್ನು ಮಾಡಲಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಣ್ಣಪ್ಪ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ತಂತ್ರಜ್ಞಾನ: ‘ಹೈಡ್ರೋ ಫೋನಿಕ್ಸ್‌ ಎಂಬ ತಂತ್ರಜ್ಞಾನದ ಮೂಲಕ ಭೂಮಿ ಬಿಟ್ಟು ಬರೀ ನೀರಿನಲ್ಲಿ ಬೆಳೆಯಬಹುದಾದ ಸಸಿಗಳನ್ನು ರೈತರಿಗೆ ಪರಿಚಯಿಸಲಾಗುವುದು. ತರಿಕೆರೆ ಕಲಾವಿದರ ತಂಡ ಬಾಳೆದಿಂಡನ್ನು ಬಳಸಿಕೊಂಡು ದೋಣಿ ಹಾಗೂ ಅದರ ಮೇಲೆ ಮಂಟಪವನ್ನು ರಚಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಮಾರಾಟಕ್ಕೂ ಅವಕಾಶ: ‘ಎಂಥೋರಿಯಂ, ಆರ್ಕಿಡ್‌ ಸೇರಿದಂತೆ ತರಹೇ ವಾರಿ ಹೂವು, ಹಣ್ಣಿನ ಗಿಡಗಳನ್ನು ಪ್ರದರ್ಶನದ ಜತೆಗೆ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಉತ್ಪನ್ನಗಳಾದ ಉಪ್ಪಿನಕಾಯಿ, ಕೋಕಂ, ಜೇನು ಹಾಗೂ ತೋಟದ ಬೆಳೆಗಳಿಗೆ ಮಳಿಗೆ ನೀಡಲಾಗುವುದು. ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆಯಿಂದ ₹ 4 ಲಕ್ಷ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ₹ 7 ಲಕ್ಷ ಬಿಡುಗಡೆಯಾಗಿದೆ’

* * 

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕಾಗಿ ಪುಣೆಯಿಂದ 5ಸಾವಿರ ಹೂವಿನ ಸಸಿಗಳನ್ನು ಕಡಲತೀರದ ಯುದ್ಧನೌಕೆ ಸಂಗ್ರಹಾ ಲಯದ ಆವರಣದಲ್ಲಿ ನೆಡಲಾಗಿದೆ ಎಚ್‌.ಪ್ರಸನ್ನ

ಹೆಚ್ಚುವರಿ ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.