7

ಗುಜರಾತ್: ಬಿಜೆಪಿಗೆ ಸರಳ ಬಹುಮತ

Published:
Updated:
ಗುಜರಾತ್: ಬಿಜೆಪಿಗೆ ಸರಳ ಬಹುಮತ

ನವದೆಹಲಿ: ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ವಿವಿಧ ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ.

ಆದರೆ, 2012ಕ್ಕೆ ಹೋಲಿಸಿದರೆ ಗೆಲುವಿನ ಅಂತರದಲ್ಲಿ ಅದು ಕುಸಿತ ಕಾಣಲಿದೆ ಎಂದು ಅವು ಭವಿಷ್ಯ ನುಡಿದಿವೆ.

ಒಂದು ಸಮೀಕ್ಷೆ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ ಎಂದು ಹೇಳಿದೆ.

182 ಸ್ಥಾನ ಬಲದ ಗುಜರಾತ್‌ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಶನಿವಾರ (ಡಿ.9) ನಡೆಯಲಿದ್ದು, 14ರಂದು ಎರಡನೇ ಹಂತದ ಮತದಾನ ನಡೆಯಲಿದೆ.

ಟೈಮ್ಸ್‌ನೌ ಮತ್ತು ಇಂಡಿಯಾ ಟಿವಿ ಸುದ್ದಿವಾಹಿನಿಗಳಿಗಾಗಿ ವಿಎಂಆರ್‌ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ವಿವರಗಳು ಬುಧವಾರ ಪ್ರಕಟವಾಗಿದ್ದು, ಬಿಜೆಪಿ ಸುಲಭವಾಗಿ ಜಯ ಸಾಧಿಸಲಿದೆ ಎಂದು ಹೇಳಿದೆ. ರಿಪಬ್ಲಿಕ್‌ ಟಿವಿ ನಡೆಸಿರುವ ಸಮೀಕ್ಷೆಯಲ್ಲೂ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ.

ಲೋಕನೀತಿ–ಸಿಎಸ್‌ಡಿಎಸ್‌–ಎಬಿಪಿ ನ್ಯೂಸ್‌ ನಡೆಸಿರುವ ಸಮೀಕ್ಷೆಯು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಸ್ಪರ್ಧೆ ನಡೆಯಲಿದೆ ಎಂದು ಹೇಳಿದೆ. ಇದರ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಶೇ 43ರಷ್ಟು ಮತಗಳನ್ನು ಪಡೆಯಲಿವೆ.

ಇದು ಮೂರನೇ ಹಂತದ ಸಮೀಕ್ಷೆಯಾಗಿದ್ದು, ಇದಕ್ಕೂ ಮೊದಲು ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಮೊದಲ ಮತ್ತು ಎರಡನೇ ಹಂತಗಳ ಸಮೀಕ್ಷೆ ನಡೆಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry