ನೋಯಿಡಾ: ಹದಿನೈದು ವರ್ಷದ ಬಾಲಕನೊಬ್ಬ ತನ್ನ ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿ ಅಂಜಲಿ ಅಗರ್‌ವಾಲ್(42) ಹಾಗೂ ಸಹೋದರಿ ಕನಿಕಾ(12) ಇಬ್ಬರನ್ನೂ ಸೋಮವಾರ(ಡಿ.4) ರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಹೊಡೆದು ಹತ್ಯೆ ಮಾಡಿದ ಬಳಿಕ ಬಾಲಕ ಪರಾರಿಯಾಗಿದ್ದ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಬಿಸ್ರಾಕ್ ಠಾಣಾ ಪೊಲೀಸರು, ವಾರಣಾಸಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಹತ್ಯೆ ಮಾಡಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಶನಿವಾರ ತಿಳಿಸಿದ್ದಾರೆ.

ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂಜಲಿ ಅವರ ಮೃತದೇಹದ ಮೇಲೆ ಹೊಡೆದಿರುವ ಏಳು ಗುರುತುಗಳು ಪತ್ತೆಯಾಗಿವೆ. ಜತೆಗೆ, ಕನಿಕಾ ತಲೆಯ ಮೇಲೆ ಐದು ಗುರುತುಗಳು ಪತ್ತೆಯಾಗಿರುವುದು ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ.

ಈ ಇಬ್ಬರು ಸೋಮವಾರ ರಾತ್ರಿ 8ರಿಂದ 11ರ ಸುಮಾರಿಗೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಹತ್ಯೆ ಮಾಡಿರುವ ಬಾಲಕ ಮೊಬೈಲ್‌ನಲ್ಲಿ ಅಪರಾಧ –ದರೋಡೆಗೆ ಸಂಬಂಧಿಸಿದ ಗೇಮ್‌ಗಳನ್ನು ಆಡುತ್ತಿದ್ದುದು ತಿಳಿದು ಬಂದಿದೆ. ಜತೆಗೆ, ಓದಿನಲ್ಲಿ ಬಾಲಕ ಹಿಂದುಳಿದಿದ್ದು, ಘಟನೆ ನಡೆದ ದಿನ ಅವರ ತಾಯಿ ಆತನನ್ನು ದೂಷಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.