ಗುಜರಾತ್ ಚುನಾವಣೆ ಮೊದಲ ಹಂತದಲ್ಲಿ ಶೇ.68ರಷ್ಟು ಮತದಾನ

ನವದೆಹಲಿ: ಗುಜರಾತ್ ವಿಧಾನಸಭೆಗೆ ಶನಿವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 68ರಷ್ಟು ಮತ ಚಲಾವಣೆಯಾಗಿವೆ ಎಂದು ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹ ಅವರು ತಿಳಿಸಿದರು.
ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್ನ ಕ್ಷೇತ್ರಗಳಲ್ಲಿ 89 ಸ್ಥಾನಗಳಿಗೆ ಶನಿವಾರ ಮೊದಲ ಹಂತದ ಮತ ಚಲಾವಣೆ ಕೊನೆಯಾದ ಬಳಿಕ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
68% voter turnout recorded in the first phase of #GujaratElection2017: Election Commission of India pic.twitter.com/OOuIqCQdPU
— ANI (@ANI) December 9, 2017
#WATCH: Election Commission addresses media after first phase of polling ends in Gujarat https://t.co/9mxCCw2XIR
— ANI (@ANI) December 9, 2017
ಮತದಾನ ಶಾಂತಿಯುತವಾಗಿ ನಡೆದಿದ್ದು, ಯುವ ಜನ, ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿ ಹಕ್ಕು ಚಲಾಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ಶಾಂತಿಯುತವಾಗಿ ನಡೆಯುವಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ. ಅದರಲ್ಲೂ ಮಹಿಳಾ ಪೊಲೀಸ್ ಸಿಬ್ಬಂದಿ ಸೇವೆ ಸ್ಮರಣೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ನಾವು ಅಂತಿಮ ಅಂಕಿ ಅಂಶಗಳನ್ನು ಪಡೆದುಕೊಳ್ಳುವ ವೇಳೆಗೆ ಮತದಾನದ ಶೇಕಡಾವಾರು ಸ್ವಲ್ಪ ಹೆಚ್ಚಾಗುತ್ತದೆ ಮತ್ತು ಕಳೆದ ವರ್ಷಗಳ ಅಂಕಿ–ಸಂಖ್ಯೆಗಳಿಗೆ ಸಮೀಪ ಬರಬಹುದು’ ಎಂದು ಅವರು ಮಾಹಿತಿ ನೀಡಿದರು.
ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಶೇ.30.31ರಷ್ಟು ಮತ ಚಲಾವಣೆಯಾಗಿದ್ದವು. ಬೆಳಿಗ್ಗೆಯಿಂದ ಜನರು ಆಸಕ್ತಿಯಿಂದ ಮಗಗಟ್ಟೆಯತ್ತ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೊದಲಬಾರಿಗೆ ಮತ ಚಲಾಯಿಸಿದ ಯುವ ಸಮೂಹದಲ್ಲಿ ಸಂತಸ, ಸಂಭ್ರಮ ಕಾಣುತ್ತಿತ್ತು. ಇನ್ನು ಶತಾಯುಷಿಗಳು ಮಕ್ಕಳು, ಮೊಮ್ಮಕ್ಕಳ ನೆರವು ಪಡೆದು ಮತ ಚಲಾಯಿಸಿದರು.
115 ವರ್ಷದ ಶತಾಯುಷಿ ಮಹಿಳೆ ಆಜಿಬೆನ್ ಚಂದ್ರವಾಡಿಯಾ ಅವರು ರಾಜ್ಕೋಟ್ನ ಉಪ್ಲೇಟ ನಗರದಲ್ಲಿ ಇಂದು ಮತ ಚಲಾವಣೆ ಮಾಡಿದ್ದಾರೆ.
24,689 ಮತಗಟ್ಟೆಗಲ್ಲಿ ಮತ ಚಲಾವಣೆ ನಡೆಯುತ್ತಿದ್ದು, 27,158 ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗಿದೆ.
ಡಿ.14ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.18ರಂದು ಫಲಿತಾಂಶ ಹೊರ ಬೀಳಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.