ಭಾನುವಾರ, ಮಾರ್ಚ್ 7, 2021
30 °C

ಸಿರಿಯಾದಿಂದ ರಷ್ಯಾ ಸೇನೆ ಭಾಗಶಃ ಹಿಂಪಡೆಯಲು ಪುಟಿನ್‌ ಆದೇಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಿರಿಯಾದಿಂದ ರಷ್ಯಾ ಸೇನೆ ಭಾಗಶಃ ಹಿಂಪಡೆಯಲು ಪುಟಿನ್‌ ಆದೇಶ

ಮಾಸ್ಕೊ: ಸಿರಿಯಾದಿಂದ ರಷ್ಯಾದ ಸೇನೆಯನ್ನು ಭಾಗಶಃ ಹಿಂಪಡೆಯಲು ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆದೇಶ ನೀಡಿದ್ದಾರೆ. ಸಿರಿಯಾದಲ್ಲಿರುವ ರಷ್ಯಾದ ವಾಯುನೆಲೆಗೆ ದಿಢೀರ್‌ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ.

2015ರಲ್ಲಿ ಈ ಸಂಘರ್ಷದಲ್ಲಿ ರಷ್ಯಾ ಮೊದಲು ಮಧ್ಯಪ್ರವೇಶಿಸಿತು.ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಇತರ ಜಿಹಾದಿಗಳು ಹಾಗೂ ಬಂಡುಕೋರರು ಸರ್ಕಾರದ ಪಡೆಗಳ ವಿರುದ್ಧ ಸಂಘರ್ಷಕ್ಕಿಳಿದಾಗ ತನ್ನ ಮಿತ್ರರಾಷ್ಟ್ರ ಡಮಾಸ್ಕಸ್‌ ಗೆ ಬೆಂಬಲವಾಗಿ ರಷ್ಯಾ ವಾಯುದಾಳಿ ನಡೆಸಿತ್ತು.

‘ರಷ್ಯಾ ಸೇನೆಯನ್ನು ತನ್ನ ಶಾಶ್ವತ ನೆಲೆಗೆ ಹಿಂದಕ್ಕೆ ಕರೆಸಬೇಕು ಎಂದು ರಕ್ಷಣಾ ಸಚಿವರಿಗೆ ಸೂಚನೆ ನೀಡಿದ್ದೇನೆ’ ಎಂದು ಪುಟಿನ್‌ ಅವರು ಸುದ್ದಿವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪುಟಿನ್‌ ಅವರನ್ನು ಸ್ವಾಗತಿಸಿದ ಸಿರಿಯಾ ಅಧ್ಯಕ್ಷ ಬಷರ್‌ ಅಲ್–ಅಸಾದ್‌, ‘ರಷ್ಯಾದ ಸೇನೆ ಸಿರಿಯಾದ ಜೊತೆ ಸೇರಿ ಅಂತರರಾಷ್ಟ್ರೀಯ ಭಯೋತ್ಪಾದನೆ ಹತ್ತಿಕ್ಕಲು ಸಹಕರಿಸಿದೆ. ನಾವು ನಿಮಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.