ಮಂಗಳವಾರ, ಆಗಸ್ಟ್ 4, 2020
22 °C

ಮೂಲಸೌಕರ್ಯ ಶೇ 6.8 ಪ್ರಗತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮೂಲಸೌಕರ್ಯ ಶೇ 6.8 ಪ್ರಗತಿ

ನವದೆಹಲಿ: ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳು ನವೆಂಬರ್‌ನಲ್ಲಿ ಶೇ 6.8ರಷ್ಟು ಪ್ರಗತಿ ಸಾಧಿಸಿವೆ.

2016ರ ನವೆಂಬರ್‌ನಲ್ಲಿ ಶೇ 3.2 ರಷ್ಟು ಪ್ರಗತಿ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಪ್ರಗತಿ ಪ್ರಮಾಣ ಶೇ 3.6ರಷ್ಟು ಹೆಚ್ಚಾಗಿದೆ.

ತೈಲಾಗಾರ, ಉಕ್ಕು ಮತ್ತು ಸಿಮೆಂಟ್‌ ವಲಯಗಳ ಉತ್ತಮ ಸಾಧನೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳು ಮೂಲಸೌಕರ್ಯ ವಲಯದ ಪ್ರಮುಖ ಎಂಟು ಕೈಗಾರಿಕೆಗಳಾಗಿವೆ.

ಕಲ್ಲಿದ್ದಲು ವಲಯದ ಪ್ರಗತಿ ಮಾತ್ರವೇ ಶೇ 6.1 ರಿಂದ ಶೇ 0.2ಕ್ಕೆ ಇಳಿಕೆ ಕಂಡಿದೆ. ಏಪ್ರಿಲ್‌–ನವೆಂಬರ್ ಅವಧಿಯಲ್ಲಿ 8 ಕೈಗಾರಿಕೆಗಳ ಪ್ರಗತಿ ಶೇ 5.3 ರಿಂದ ಶೇ 3.9ಕ್ಕೆ ಇಳಿಕೆ ಕಂಡಿದೆ.

ಮೂಲಸೌಕರ್ಯ ವಲಯವು ಕೈಗಾರಿಕಾ ಪ್ರಗತಿಗೆ ಶೇ 41 ರಷ್ಟು ಕೊಡುಗೆ ನೀಡುತ್ತಿದೆ. ಹೀಗಾಗಿ 8 ಕೈಗಾರಿಕೆಗಳ ಉತ್ತಮ ಪ್ರಗತಿಯಿಂದ ಕೈಗಾರಿಕಾ ಪ್ರಗತಿ ಸೂಚ್ಯಂಕವೂ ಏರಿಕೆ ಕಾಣುವ ವಿಶ್ವಾಸ ವ್ಯಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.