ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಕರ ತೆರಿಗೆ ಕಡಿತ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿಯಲ್ಲಿ ಕಂಪೋಸಿಷನ್‌ ಸ್ಕೀಮ್ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ತಯಾರಕರಿಗೆ ತೆರಿಗೆಯನ್ನು ಈಗಿರುವ ಶೇ 2 ರಿಂದ ಶೇ 1ಕ್ಕೆ  ಇಳಿಸಲಾಗಿದೆ.

ನವೆಂಬರ್‌ 1ರಂದು ನಡೆದ ಸಭೆಯಲ್ಲಿ ತೆರಿಗೆಯನ್ನು ಇಳಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಂಡಿರುವ ವರ್ತಕರು ಸಹ ತಮ್ಮ ಒಟ್ಟಾರೆ ವಹಿವಾಟಿನಲ್ಲಿ ತೆರಿಗೆಗೆ ಒಳಪಡುವ ಸರಕುಗಳಿಗೆ ಶೇ 1 ರಷ್ಟು ತೆರಿಗೆ ಪಾವತಿಸಬೇಕು. ಈವರೆಗೆ ವರ್ತಕರು ಒಟ್ಟಾರೆ ವಹಿವಾಟಿನ ಮೇಲೆ (ತೆರಿಗೆ ವಿನಾಯ್ತಿಯಲ್ಲಿ ಸೇರಿರುವ  ಹಣ್ಣು, ತರಕಾರಿಗಳನ್ನೂ ಒಳಗೊಂಡು) ತೆರಿಗೆ ಪಾವತಿಸುತ್ತಿದ್ದರು.

ಒಟ್ಟು 15 ಲಕ್ಷ ಉದ್ಯಮಗಳು ಈ ಸ್ಕೀಮ್‌ ಆ‌ಯ್ಕೆಮಾಡಿಕೊಂಡಿವೆ. ವಾರ್ಷಿಕ ವಹಿವಾಟು ₹ 1.5 ಕೋಟಿ ದಾಟದೇ ಇರುವ ವರ್ತಕರು, ತಯಾರಕರು ಮತ್ತು ರೆಸ್ಟೊರಂಟ್‌ಗಳು ಕಂಪೋಸಿಷನ್ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT