ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿ ಪಾಲನೆ ಕಷ್ಟ

7

ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿ ಪಾಲನೆ ಕಷ್ಟ

Published:
Updated:
ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿ ಪಾಲನೆ ಕಷ್ಟ

ಬೆಂಗಳೂರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ದೇಶ ಸದಸ್ಯತ್ವವನ್ನು ಹೊಂದಿಲ್ಲ. ಈ ಸಮಿತಿಯ ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿಯನ್ನು ಕಾಯ್ದುಕೊಳ್ಳುವುದು ಕಷ್ಟ ಸಾಧ್ಯ ಎಂದು ನಿವೃತ್ತ ರಾಯಭಾರಿ ಎನ್‌.ಪಾರ್ಥಸಾರಥಿ ಅಭಿಪ್ರಾಯಪಟ್ಟರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಭಾರತೀಯ ವಿದೇಶಾಂಗ ನೀತಿ: ಹಿಂದೆ, ಇಂದುಮತ್ತು ಸವಾಲುಗಳು’ ಕುರಿತು ಮಾತನಾಡಿದರು.

‘ಭದ್ರತಾ ಸಮಿತಿಯಲ್ಲಿ ಸ್ಥಾನ ಸಿಕ್ಕಿದ್ದೇ ಆದರೆ, ಭಾರತ ಜಾಗರೂಕತೆಯ ಹೆಜ್ಜೆ ಇಡಬೇಕಾಗುತ್ತದೆ’ ಎಂದರು.

‘1962ರಲ್ಲಿ ಚೀನಾ ವಿರುದ್ಧ ಭಾರತ ಕಂಡ ಸೋಲು ದೇಶದ ಜನರ ಆತ್ಮಸ್ಥೈರ್ಯವನ್ನು ಕುಗ್ಗಿಸಿತ್ತು. ಆದರೆ, ದೋಕಲಾ ಗಡಿ ವಿವಾದದ ವಿಚಾರದಲ್ಲಿ ಅನುಸರಿಸಿದ ನೀತಿಯಿಂದ ನಮ್ಮ ದೇಶದ ಬಗ್ಗೆ ಅನ್ಯ ದೇಶಗಳು ಹೊಂದಿರುವ ಭಾವನೆ ಬದಲಾಗಿದೆ. ಚೀನಾವನ್ನು ಎದುರಿಸಬಲ್ಲ ಪ್ರಮುಖ ಶಕ್ತಿ ಭಾರತ ಎಂದೇ ಭಾವಿಸಿವೆ’ ಎಂದು ಹೇಳಿದರು.

ವಿದೇಶಾಂಗ ನೀತಿಯು ನಿಂತ ನೀರಲ್ಲ ಅಥವಾ ಏಕಾಂತದಲ್ಲಿ ಮೂಡುವ ವಿಚಾರವಲ್ಲ. ಜನರ ಸುರಕ್ಷತೆಗಾಗಿ ಚುನಾಯಿತ ಸರ್ಕಾರ ಹಾಗೂ ಅಧಿಕಾರಿ ವರ್ಗ ಜತೆಗೂಡಿ ತಳೆಯುವ ಮುಖ್ಯ ನಿರ್ಧಾರಗಳೇ ವಿದೇಶಾಂಗ ನೀತಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry