ಅಮೆರಿಕದ ಅಣ್ವಸ್ತ್ರ ಬಟನ್‌ ಅತ್ಯಂತ ಪ್ರಬಲ: ಟ್ರಂಪ್‌ ತಿರುಗೇಟು

7

ಅಮೆರಿಕದ ಅಣ್ವಸ್ತ್ರ ಬಟನ್‌ ಅತ್ಯಂತ ಪ್ರಬಲ: ಟ್ರಂಪ್‌ ತಿರುಗೇಟು

Published:
Updated:
ಅಮೆರಿಕದ ಅಣ್ವಸ್ತ್ರ ಬಟನ್‌ ಅತ್ಯಂತ ಪ್ರಬಲ: ಟ್ರಂಪ್‌ ತಿರುಗೇಟು

ವಾಷಿಂಗ್ಟನ್‌: ‘ನನ್ನ ಬಳಿ ಇರುವ ಅಣ್ವಸ್ತ್ರ ಬಟನ್‌ ಅತ್ಯಂತ ದೊಡ್ಡದು ಮತ್ತು ಪ್ರಬಲವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರಿಗೆ ತಿರುಗೇಟು ನೀಡಿದ್ದಾರೆ.

‘ಈ ವಿಷಯವನ್ನು ಯಾರಾದರೂ ಕಿಮ್‌ ಅವರಿಗೆ ತಿಳಿಸಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಉತ್ತರ ಕೊರಿಯಾದ ಅಣ್ವಸ್ತ್ರಗಳು ಅಮೆರಿಕದ ಯಾವುದೇ ಪ್ರದೇಶಕ್ಕೂ ತಲುಪುವ ಸಾಮರ್ಥ್ಯ ಹೊಂದಿವೆ ಮತ್ತು ಅದರ ಬಟನ್‌ ನನ್ನ ಮೇಜಿನ ಮೇಲಿದೆ’ ಎಂದು ಕಿಮ್‌ ಹೇಳಿಕೆ ನೀಡಿದ್ದರು.

‘ಉತ್ತರ ಕೊರಿಯಾದ ಮೇಲೆ ಹೆಚ್ಚು ಒತ್ತಡ ಹಾಕುವತ್ತ ನಾವು ಗಮನ ನೀಡುತ್ತಿದ್ದೇವೆ. ಉಳಿದ ರಾಷ್ಟ್ರಗಳೂ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಶ್ವೇತ ಭವನ ಒತ್ತಾಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry