ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಚಿಕಿತ್ಸೆ ಅಗತ್ಯ: ಅಣ್ಣಾ ಹಜಾರೆ

7

ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಚಿಕಿತ್ಸೆ ಅಗತ್ಯ: ಅಣ್ಣಾ ಹಜಾರೆ

Published:
Updated:
ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಚಿಕಿತ್ಸೆ ಅಗತ್ಯ: ಅಣ್ಣಾ ಹಜಾರೆ

ಬೆಳಗಾವಿ: ‘ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವವರನ್ನು ಆಸ್ಪತ್ರೆಗೆ ಸೇರಿಸಿ ಮಾನಸಿಕ ಚಿಕಿತ್ಸೆ ಕೊಡಿಸಬೇಕು’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಶುಕ್ರವಾರ ಇಲ್ಲಿ ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ವ್ಯವಸ್ಥೆ ನಿಂತಿರುವುದೇ ಸಂವಿಧಾನದ ಮೇಲೆ. ಸಚಿವ, ಸಂಸದ ಯಾರೇ ಆಗಲಿ ಸಂವಿಧಾನ ಬದಲಿಸುತ್ತೇವೆ ಎನ್ನುವುದು ಸರಿಯಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣ ಮಾಡುತ್ತೇವೆ ಎಂದು ಪ್ರಧಾನಿ ಹೋದಲ್ಲೆಲ್ಲಾ ಹೇಳುತ್ತಿದ್ದಾರೆ. ದೊಡ್ಡ ದೊಡ್ಡ ಜಾಹೀರಾತುಗಳನ್ನು ಹಾಕಿಸುತ್ತಿದ್ದಾರೆ. ಜನರು ಸಂಕಲ್ಪ ಮಾಡಬೇಕು ಎನ್ನುತ್ತಾರೆ. ಆದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜನಲೋಕಪಾಲ ಜಾರಿಗೆ ಕ್ರಮ ಕೈಗೊಂಡಿಲ್ಲ. ನೋಟು ರದ್ದತಿ ನಂತರ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ವಿದೇಶದಲ್ಲಿ ಇರುವ ಕಪ್ಪುಹಣ ತರುವುದಕ್ಕೂ ಆಗಿಲ್ಲ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry