19 ವರ್ಷದೊಳಗಿನವರ ವಿಶ್ವಕಪ್‌ ಅಭ್ಯಾಸ ಪಂದ್ಯ: ಇಶಾನ್‌ ಮೋಡಿ

7

19 ವರ್ಷದೊಳಗಿನವರ ವಿಶ್ವಕಪ್‌ ಅಭ್ಯಾಸ ಪಂದ್ಯ: ಇಶಾನ್‌ ಮೋಡಿ

Published:
Updated:

ಕ್ರೈಸ್ಟ್‌ಚರ್ಚ್‌ (ಪಿಟಿಐ): ವೇಗಿ ಇಶಾನ್ ಪೊರೆಲ್ (23ಕ್ಕೆ4) ಅವರ ಮಿಂಚಿನ ದಾಳಿಯ ಬಲದಿಂದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಮಂಗಳವಾರ 189ರನ್‌ಗಳಿಂದ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ ಬರೋಬ್ಬರಿ 332 ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪಡೆ 38.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 143ರನ್ ಗಳಿಸಿತು.

ಇಶಾನ್‌ ದಾಳಿ: ಭಾರತದ ವೇಗದ ಬೌಲರ್‌ ಇಶಾನ್ ಅವರ ದಾಳಿಗೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿದರು.

ಸ್ಕೋರು: ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 332 (ಆರ್ಯನ್‌ ಜುಯಲ್‌ 86, ಹಿಮಾಂಶು ರಾಣಾ 68; ಅಕೋನಾ

ಮನ್ಯಾಕ್‌ 40ಕ್ಕೆ3). ದಕ್ಷಿಣ ಆಫ್ರಿಕಾ: 38.3 ಓವರ್‌ಗಳಲ್ಲಿ 143 (ಜೀನ್ ಡು ಪ್ಲೆಸಿ  50,

ಜಿವೇಶನ್‌ ಪಿಳ್ಳೈ 29, ಇಶಾನ್ ಪೊರೆಲ್‌ 23ಕ್ಕೆ4).

ಫಲಿತಾಂಶ: ಭಾರತಕ್ಕೆ 189 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry