ಬಹಳಷ್ಟು ಪ್ರಶಸ್ತಿಪತ್ರ, ಪದಕಗಳು ಕಪಾಟಿನಲ್ಲಿ ಭದ್ರ; ಪ್ರಧಾನಿ ನೀಡಿದ ಈ ಪ್ರಶಂಸೆ ಎಂದೆಂದಿಗೂ ಮನಸ್ಸಿನಲ್ಲಿ ಉಳಿಯಲಿದೆ: ರತ್ನಪ್ರಭಾ

7

ಬಹಳಷ್ಟು ಪ್ರಶಸ್ತಿಪತ್ರ, ಪದಕಗಳು ಕಪಾಟಿನಲ್ಲಿ ಭದ್ರ; ಪ್ರಧಾನಿ ನೀಡಿದ ಈ ಪ್ರಶಂಸೆ ಎಂದೆಂದಿಗೂ ಮನಸ್ಸಿನಲ್ಲಿ ಉಳಿಯಲಿದೆ: ರತ್ನಪ್ರಭಾ

Published:
Updated:
ಬಹಳಷ್ಟು ಪ್ರಶಸ್ತಿಪತ್ರ, ಪದಕಗಳು ಕಪಾಟಿನಲ್ಲಿ ಭದ್ರ; ಪ್ರಧಾನಿ ನೀಡಿದ ಈ ಪ್ರಶಂಸೆ ಎಂದೆಂದಿಗೂ ಮನಸ್ಸಿನಲ್ಲಿ ಉಳಿಯಲಿದೆ: ರತ್ನಪ್ರಭಾ

ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ಬಹಳಷ್ಟು ಪ್ರಶಸ್ತಿಪತ್ರ, ಪದಕಗಳು ಕಪಾಟಿನಲ್ಲಿ ಭದ್ರವಾಗಿವೆ. ಆದರೆ, ಪ್ರಧಾನಿ ನೀಡಿದ ಈ ಪ್ರಶಂಸೆ ಎಂದೆಂದಿಗೂ ಮನಸ್ಸಿನಲ್ಲಿ ಉಳಿಯಲಿದೆ’ ಎಂದು ಟ್ವೀಟಿಸಿದ್ದಾರೆ.

ಉನ್ನತ ಮಟ್ಟದ ಅಧಿಕಾರಿಗಳ ಸಮಾವೇಶದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಟ್ವೀಟ್‌ ಪ್ರಸ್ತಾಪಿಸಿ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದಾದ ಬಳಿಕ ರತ್ನಪ್ರಭಾ ಅವರಿಗೆ ಟ್ವಿಟರ್‌ ಮೂಲಕ ಹಾಗೂ ನೇರವಾಗಿ ಸಾಕಷ್ಟು ಜನರು ಅಭಿನಂದನೆ ಸಲ್ಲಿಸುವ ಜತೆಗೆ ಹಿಂದಿನ ಕಾರ್ಯಗಳನ್ನು ನೆನಪಿಸಿ ಧನ್ಯವಾದವನ್ನೂ ತಿಳಿಸಿದ್ದಾರೆ.

‘ನನ್ನಲ್ಲಿ ಅನೇಕ ಪ್ರಶಸ್ತಿಪತ್ರ ಹಾಗೂ ಪದಕಗಳು(ಕಪಾಟಿನಲ್ಲಿ ಭದ್ರವಾಗಿ) ಇರಬಹುದು. ಆದರೆ ಗೌರವಾನ್ವಿತ ಪ್ರಧಾನಿ ಅವರು ಮಾತಿನಲ್ಲಿ ನೀಡಿದ ಪ್ರಮಾಣಪತ್ರ ಎಂದೆಂದಿಗೂ ನನ್ನ ಹಾಗೂ ಜನರ ಮನಸ್ಸಿನಲ್ಲಿ ಉಳಿಯಲಿದೆ. ಇದು ಅತ್ಯಮೂಲ್ಯ ಗೌರವ’ ಎಂದು ಬುಧವಾರ ಟ್ವೀಟಿಸಿದ್ದಾರೆ.

ಇದೇ 5ರಂದು ನವದೆಹಲಿಯ ಡಾ.ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ, ರತ್ನಪ್ರಭಾ ಅವರು 27 ವರ್ಷಗಳ ಹಿಂದೆ ತೋರಿದ್ದ ಸಣ್ಣ ಕಾಳಜಿಯ ಪರಿಣಾಮವನ್ನು ವಿವರಿಸಿ ಮಾಡಿದ್ದ ಟ್ವೀಟ್‌ ಅನ್ನು ಭಾಷಣದಲ್ಲಿ ಪ್ರಸ್ತಾಪಿಸಿ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಪ್ರಧಾನಿ ಅವರು ಹೇಳಿದ ಮಾತು ಅಕ್ಷರಶಹ ಸತ್ಯ. ನಾವು ಮಾಡಿದ ಸಣ್ಣ ಕೆಲಸವನ್ನೂ ಹಿಂದುಳಿದ ಪ್ರದೇಶಗಳ ಜನರು ಎಂದಿಗೂ ಮರೆಯುವುದಿಲ್ಲ. 34 ವರ್ಷಗಳ ನಂತರವೂ ಬೀದರ್‌ನ ಜನರು ಇಂದಿಗೂ ನನ್ನನ್ನು ಕಾಣಲು ಬರುತ್ತಿರುತ್ತಾರೆ. ನೀವು ಬೀದರ್‌ನಿಂದ ಹೊರಟು ಬಂದಿರಿ, ಆದರೆ ಮನಸ್ಸಿನಿಂದ ಅಲ್ಲ ಎಂದು ನಿವೃತ್ತ ಶಿಕ್ಷಕರೊಬ್ಬರು ಹೇಳಿದರು. ತೃಪ್ತಿಯೇ ಭೂಮಿಯ ಮೇಲಿನ ಬಹುದೊಡ್ಡ ಕಾಣಿಕೆ ’ ಎಂದು ಟ್ವೀಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry