ಬಿಎಫ್‌ಐ ಮಂಡಳಿ ಪ್ರತಿನಿಧಿಯಾಗಿ ಸರಿತಾ ಆಯ್ಕೆ

7

ಬಿಎಫ್‌ಐ ಮಂಡಳಿ ಪ್ರತಿನಿಧಿಯಾಗಿ ಸರಿತಾ ಆಯ್ಕೆ

Published:
Updated:
ಬಿಎಫ್‌ಐ ಮಂಡಳಿ ಪ್ರತಿನಿಧಿಯಾಗಿ ಸರಿತಾ ಆಯ್ಕೆ

ನವದೆಹಲಿ: ಎಲ್‌. ಸರಿತಾ ದೇವಿ ಅವರು ಭಾರತ ಬಾಕ್ಸಿಂಗ್ ಸಂಸ್ಥೆ (ಬಿಎಫ್‌ಐ) ಕಾರ್ಯನಿರ್ವಾಹಕ ಮಂಡಳಿಗೆ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಸರಿತಾದೇವಿ ಹೋದ ವರ್ಷ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ರೋಹ್ಟಕ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ವೇಳೆ ನಡೆದ ಚುನಾವಣೆಯಲ್ಲಿ ಅವರಿಗೆ 31 ರಲ್ಲಿ 22 ತಂಡಗಳ ನಾಯಕರು ಮತ ನೀಡಿದ್ದಾರೆ.

ಚುನಾವಣೆಯಲ್ಲಿ ಸರಿತಾ ಎದುರು ನಿಂತಿದ್ದ ಏಕೈಕ ಸ್ಪರ್ಧಿ ರೈಲ್ವೇಸ್ ಸ್ಪೋರ್ಟ್ಸ್ ಪ್ರಮೋಷನ್‌ ಬೋರ್ಡ್‌ ತಂಡದ ಸೀಮಾ ಪೂನಿಯಾ ಅವರನ್ನು ಹಿಂದಿಕ್ಕಿದ್ದಾರೆ.

‘ಮಹಿಳಾ ಬಾಕ್ಸರ್‌ಗಳ ಸಮಸ್ಯೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಇದರಿಂದ ಅವರ ತೊಂದರೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಿದ್ದೇನೆ’ ಎಂದು ಮಣಿಪುರದ ಬಾಕ್ಸರ್ ಹೇಳಿದ್ದಾರೆ.

‘ಎರಡು ದಿನದ ಹಿಂದೆಯಷ್ಟೇ ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದೆ. ಹಿರಿಯ ಬಾಕ್ಸರ್ ಆಗಿರುವುದರಿಂದ ಮಹಿಳೆಯರಿಗೆ ಧ್ವನಿಯಾಗುವುದು ಮುಖ್ಯ ಎಂದು ನನಗೆ ಅನ್ನಿಸಿತು’ ಎಂದು ಸರಿತಾ ಅಭಿಪ್ರಾಯಪಟ್ಟಿದ್ದಾರೆ.

2016ರಲ್ಲಿ ಮನೋಜ್‌ ಕುಮಾರ್‌ ಕಾರ್ಯನಿರ್ವಾಹಕ ಮಂಡಳಿಯ ಪ್ರತಿನಿಧಿಯಾಗಿ ಆ‌ಯ್ಕೆಯಾಗಿದ್ದರು. ಈ ಚುನಾವಣೆ ಕೂಡ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ವೇಳೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry