ಹಳೆಯ ಧಾಟಿ ಸೂಕ್ತ

7

ಹಳೆಯ ಧಾಟಿ ಸೂಕ್ತ

Published:
Updated:

‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜನೆ ಮಾಡಿರುವ ಧಾಟಿಗೇ ಅಧಿಕೃತ ಮಾನ್ಯತೆ ನೀಡಬೇಕು’ ಎಂದು ಸಾಹಿತಿ ಕೆ.ಎಸ್‌. ನಿಸಾರ್‌ ಅಹಮದ್‌ ಮತ್ತು ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಸಂತೋಷದ ವಿಚಾರ.

ಈ ಗೀತೆಯು ಮುಂದೆ ನಾಡಗೀತೆ ಆಗುವುದೆಂಬ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲೇ ಅನಂತಸ್ವಾಮಿಯವರು ಅದಕ್ಕೆ ಸುಮಧುರವಾದ ರಾಗಸಂಯೋಜನೆ ಮಾಡಿ ಜನಪ್ರಿಯಗೊಳಿಸಿದ್ದರು. ಆ ಧಾಟಿಗೇ ಮಾನ್ಯತೆ ನೀಡಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಅವರಿಗೆ ಗೌರವ ಸಲ್ಲಿಸಬೇಕಾದ್ದು ಸರ್ಕಾರದ ಕರ್ತವ್ಯ. ವಸಂತ ಕನಕಾಪುರ ಅಧ್ಯಕ್ಷತೆಯ ಸಮಿತಿಯೂ ಮೈಸೂರು ಅನಂತಸ್ವಾಮಿ ಮಾಡಿರುವ ರಾಗ ಸಂಯೋಜನೆಗೇ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿತ್ತು.

‘ಅಶ್ವತ್ಥ್‌ ಅವರು ಹಾಕಿರುವ ರಾಗವೇ ಇರಲಿ’ ಎಂದು ಕೆಲವು ಗಾಯಕರು ಒತ್ತಾಯಿಸುತ್ತಿದ್ದಾರೆ. ಈ ರಾಗ ಯುದ್ಧಕ್ಕೆ ಹೊರಟಿರುವ ಸೈನಿಕರ ಮೆರವಣಿಗೆಯ ಶೈಲಿಯಲ್ಲಿದ್ದು, ನಾಡಗೀತೆಗೆ ಒಗ್ಗುತ್ತಿಲ್ಲ. ಹಾಡಲು ತುಂಬಾ ಸಮಯವನ್ನೂ ತೆಗೆದುಕೊಳ್ಳುತ್ತದೆ. ಅನಂತ ಸ್ವಾಮಿಯವರ ರಾಗ ಸಂಯೋಜನೆ ಗೀತೆಗೆ ಒಪ್ಪುವಂತಿದ್ದು, ಅದಕ್ಕೇ ಮಾನ್ಯತೆ ನೀಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry