ವಾಲಿಬಾಲ್: ಫೈನಲ್‌ಗೆ ಪಶ್ಚಿಮ ಬಂಗಾಳ

7

ವಾಲಿಬಾಲ್: ಫೈನಲ್‌ಗೆ ಪಶ್ಚಿಮ ಬಂಗಾಳ

Published:
Updated:
ವಾಲಿಬಾಲ್: ಫೈನಲ್‌ಗೆ ಪಶ್ಚಿಮ ಬಂಗಾಳ

ವಿಜಯಪುರ: ಅಮೋಘ ಪ್ರದರ್ಶನ ನೀಡಿದ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಂಡಗಳು ಎಸ್‌ಜಿಎಫ್‌ಐನ 63ನೇ ರಾಷ್ಟ್ರೀಯ ಶಾಲಾ ಬಾಲಕ–ಬಾಲಕಿಯರ 14 ವರ್ಷದೊಳಗಿನವರ ವಾಲಿಬಾಲ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದ ಬಾಲಕರ ವಿಭಾಗದಲ್ಲಿ ಉತ್ತರ ಪ್ರದೇಶ 25-22, 25-18, 25-13 ಪಾಯಿಂಟ್‌ಗಳ ಅಂತರದಿಂದ ಹರಿಯಾಣ ತಂಡವನ್ನು ಸೋಲಿಸಿತು. ಸತ್ಯದೇವ ಸಿಂಗ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  ಬಾಲಕರ ವಿಭಾಗದ ಇನ್ನೊಂದು ಸೆಮಿಫೈನಲ್‌ನಲ್ಲಿ ತೆಲಂಗಾಣ 25–19, 25–23, 25–19ರಲ್ಲಿ ವಿದ್ಯಾಭಾರತಿ ತಂಡವನ್ನು ಸೋಲಿಸಿತು.

ಬಾಲಕಿಯರ ವಿಭಾಗದಲ್ಲಿ ಪಶ್ಚಿಮ ಬಂಗಾಳ 25–18, 25–14, 25–16 ಅಂಕಗಳಿಂದ ಹರಿಯಾಣ ತಂಡವನ್ನು ಮಣಿಸಿತು.

ಇದೇ ವಿಭಾಗದ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ತಮಿಳುನಾಡು ತಂಡ ಉತ್ತರ ಪ್ರದೇಶವನ್ನು ಮಣಿಸಿತು. ತಮಿಳುನಾಡು ಮೊದಲ ಎರಡು ಸೆಟ್‌ಗಳಲ್ಲಿ 25–17, 25–23ರಲ್ಲಿ ಮುನ್ನಡೆ ಪಡೆದುಕೊಂಡಿತ್ತು.

ನಂತರ ತಿರುಗೇಟು ನೀಡಿದ ಉತ್ತರ ಪ್ರದೇಶ 25–18, 25–18ರಲ್ಲಿ ಮುನ್ನಡೆ ಪಡೆದು ಸಮಬಲ ಸಾಧಿಸಿತು. ಆದ್ದರಿಂದ ನಿರ್ಣಾಯಕ ಸೆಟ್‌ ಕುತೂಹಲಕ್ಕೆ ಕಾರಣವಾಗಿತ್ತು. ಅಂತಿಮವಾಗಿ ತಮಿಳುನಾಡು ತಂಡ 15–14ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಶುಕ್ರವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry