ಉಗ್ರವಾದದ ವಿರುದ್ಧ ಕಠಿಣ ನೀತಿ ಮುಂದುವರಿಕೆ: ಸೇನಾ ಮುಖ್ಯಸ್ಥ ಹೇಳಿಕೆ

7

ಉಗ್ರವಾದದ ವಿರುದ್ಧ ಕಠಿಣ ನೀತಿ ಮುಂದುವರಿಕೆ: ಸೇನಾ ಮುಖ್ಯಸ್ಥ ಹೇಳಿಕೆ

Published:
Updated:
ಉಗ್ರವಾದದ ವಿರುದ್ಧ ಕಠಿಣ ನೀತಿ ಮುಂದುವರಿಕೆ: ಸೇನಾ ಮುಖ್ಯಸ್ಥ ಹೇಳಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸುವಂತೆ ಮಾಡುವ ನಿಟ್ಟಿನಲ್ಲಿ ಸೇನಾ ಚಟುವಟಿಕೆ ಮತ್ತು ರಾಜಕೀಯ ಕ್ರಮಗಳು ಜತೆಜತೆಯಾಗಿ ಸಾಗಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆ ನಿಗ್ರಹಿಸಲು ಸೇನಾ ಕಾರ್ಯಾಚರಣೆ ಹೆಚ್ಚಿಸುವ ಬಗ್ಗೆಯೂ ಅವರು ಒಲವು ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಸಶಸ್ತ್ರ ಪಡೆಗಳು ಈಗಿರುವ ಸ್ಥಿತಿಯಲ್ಲೇ ಮುಂದುವರಿಯದೆ ಹೊಸ ಕಾರ್ಯತಂತ್ರ ಮತ್ತು ತಂತ್ರಗಾರಿಕೆಯನ್ನು ಅನುಸರಿಸಬೇಕು ಎಂದಿರುವ ಅವರು, ತಾವು ಅಧಿಕಾರ ಸ್ವೀಕರಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಗಡಿಯಾಚೆಗಿನ ಭಯೋತ್ಪಾದನೆ ಕಡಿಮೆ ಮಾಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕಿದೆ. ಉಗ್ರವಾದದ ವಿರುದ್ಧ ಸೇನೆ ತನ್ನ ಕಠಿಣ ನೀತಿಯನ್ನು ಮುಂದುವರಿಸಲಿದೆ’ ಎಂದು ಅವರು ಸಂದರ್ಶನವೊಂದರಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ...

ಸಾಮರ್ಥ್ಯ ಪರೀಕ್ಷಿಸಲು ಭಾರತಕ್ಕೆ ಸ್ವಾಗತ: ಪಾಕ್ ವಿದೇಶಾಂಗ ಸಚಿವ ಸವಾಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry